ಬೇಕಾಗುವ ಸಾಮಗ್ರಿ: ವೆನಿಲ್ಲಾ ಐಸ್ಕ್ರೀಂ ಒಂದು ಲೀಟರ್, ಇನ್ಸ್ಟಂಟ್ ಕಾಫಿ ಪುಡಿ ಎರಡು ಚಮಚ, ನೆಲಗಡಲೆ ಚಿಕ್ಕಿ ಪುಡಿ ಮೂರು ಚಮಚ.
ಮಾಡುವ ವಿಧಾನ: ಐಸ್ಕ್ರೀಮನ್ನು ಒಂದು ಗಂಟೆ ಕಾಲ ಹೊರಗಿಟ್ಟು ಪೂರ್ತಿಯಾಗಿ ಕರಗಿಸಿ. ಕರಗಿದ ಐಸ್ಕ್ರೀಮಿಗೆ ರುಚಿಗೆ ತಕ್ಕಷ್ಟು ಕಾಫಿ ಪುಡಿ ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಚಿಕ್ಕಿ ಪುಡಿ ಸೇರಿಸಿ. ನಾಲ್ಕು ಗಂಟೆ ಕಾಲ ಫ್ರೀಝರ್ನಲ್ಲಿ ಗಟ್ಟಿಯಾಗಲು ಬಿಡಿ. ರುಚಿ ರುಚಿಯಾದ ಕಾಫಿ ಐಸ್ಕ್ರೀಂ ರೆಡಿ.