ಏಲಕ್ಕಿ ಸಿಪ್ಪೆ ಮತ್ತು ಕಾಳು ಮೆಣಸಿಗೆ ನೀರು ಹಾಕಿ ಅರ್ಧ ಗಂಟೆ ನೆನೆಸಿಟ್ಟು ಮಿಕ್ಸಿಯಲ್ಲಿ ನುಣ್ಣಗೆ ಅರಿಯಿರಿ. ನಂತರ 2-3 ಲೋಟ ಬಿಸಿ ನೀರು ಕಾಯಿಸಿಟ್ಟುಕೊಂಡು ಅದಕ್ಕೆ ಸೇರಿಸಿ. ಆರಿದ ನಂತರ ಹಣಿಯಾದ ತಿಳಿ ನೀರನ್ನು ಬಸಿಯಿರಿ. (ಮತ್ತೆ ಚರಟಕ್ಕೆ ಸ್ವಲ್ಪ ಬಿಸಿನೀರು ಹಾಕಿ ಬಳಸಬಹುದು) . ಈ ಹಣ್ಣಿಗೆ ಬೆಲ್ಲ, ನಿಂಬೆ ರಸ, ಉಪ್ಪು ಸೇರಿಸಿ ಮಿಶ್ರಣ ಮಾಡಿರಿ. ಫ್ರಿಜ್‌ನಲ್ಲಿ ತಂಪು ಮಾಡಿಕೊಂಡೂ ಕುಡಿಯಬಹುದು. ಇದು ಬಾಯಿ ರುಚಿ ಹೆಚ್ಚಿಸುತ್ತದೆಯಲ್ಲದೇ, ಅಜೀರ್ಣಕ್ಕೆ ಒಳ್ಳೆಯದು ಮತ್ತು ಪಿತ್ತ ಶಮನಕಾರಿ ಕೂಡ ಹೌದು.