Article Sweets Recipes In Kannada %e0%b2%8e%e0%b2%b3%e0%b3%8d%e0%b2%b3%e0%b3%81 %e0%b2%b9%e0%b3%8b%e0%b2%b3%e0%b2%bf%e0%b2%97%e0%b3%86 109111400075_1.htm

Select Your Language

Notifications

webdunia
webdunia
webdunia
webdunia

ಎಳ್ಳು ಹೋಳಿಗೆ

ಸಿಹಿತಿಂಡಿ
ಬೇಕಾಗುವ ಸಾಮಗ್ರಿ- ಕಾಲು ಕೆಜಿ ಎಳ್ಳು, ಕಾಲು ಕೆಜಿ ಕಡಲೆ, ಅರ್ಧ ಕೆಜಿ ಬೆಲ್ಲ, ನಾಲ್ಕು ಏಲಕ್ಕಿ, ಕಾಲು ಕೆಜಿ ಮೈದಾ ಹಿಟ್ಟು, ಸ್ವಲ್ಪ ಅಡುಗೆ ಎಣ್ಣೆ.

ಮಾಡುವ ವಿಧಾನ- ಎಳ್ಳನ್ನು ಹುರಿದು ಪುಡಿಮಾಡಬೇಕು. ಕಡಲೆಯನ್ನು ಪ್ರತ್ಯೇಕವಾಗಿ ಪುಡಿಮಾಡಿಟ್ಟುಕೊಳ್ಳಬೇಕು. ನಂತರ ಹದವಾದ ಬಿಸಿಯಲ್ಲಿ ಬೆಲ್ಲದ ಪಾಕ ಮಾಡಿಡಿ. ಎಳ್ಳು ಪುಡಿ ಹಾಗೂ ಕಡಲೆ ಪುಡಿಯನ್ನು ಮಿಕ್ಸ್ ಮಾಡಿ ಬೆಲ್ಲದ ಪಾಕಕ್ಕೆ ಹಾಕಿ. ಆಗಲೇ ಸ್ವಲ್ಪ ಏಲಕ್ಕಿ ಪುಡಿಯನ್ನೂ ಹಾಕಿ. ಈ ಮಿಶ್ರಣದಿಂದ ಹೂರಣ ತಯಾರಿಸಿ. ಇದಕ್ಕೂ ಮೊದಲೇ ಮೈದಾಹಿಟ್ಟಿಗೆ ನೀರು ಬೆರೆಸಿ ಉಂಡೆಗಳನ್ನು ಮಾಡಿಡಿ. ಉಂಡೆಗಳನ್ನು ಚಪ್ಪಟೆಯಾಗಿಸಿ ಅದರಲ್ಲಿ ನಿಂಬೆ ಗಾತ್ರದ ಹೂರಣವಿಟ್ಟು ಅದನ್ನು ಕವರ್ ಮಾಡಿ. ನಂತರ ಹೋಳಿಗೆಯ ಆಕಾರದಲ್ಲಿ ಲಟ್ಟಿಸಿ ಕಾದ ಕಾವಲಿಯಲ್ಲಿ ಬೇಯಿಸಿ. ಬಿಸಿ ಬಿಸಿಯಾದ ಎಳ್ಳು ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.

Share this Story:

Follow Webdunia kannada