ಬೇಕಾಗುವ ಸಾಮಗ್ರಿ: ನಾಲ್ಕು ಚಮಚ ಎಳ್ಳು, ತುರಿದ ಬೆಲ್ಲ, ಸ್ವಲ್ಪ ನೀರು, ಏಲಕ್ಕಿ.
ಮಾಡುವ ವಿಧಾನ: ಎಳ್ಳು ಹಾಗೂ ತುರಿದ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ. ನುಣ್ಣಗಾದ ಮೇಲೆ ಇನ್ನೂ ಸ್ವಲ್ಪ ನೀರು ಹಾಕಿ ತಿಳಿಯಾಗಿಸಿ. ನಂತರ ಇದನ್ನು ಸೋಸಿ. ಏಲಕ್ಕಿ ಪುಡಿ ಉದುರಿಸಿ. ಎಳ್ಳು ಜ್ಯೂಸ್ ಸಿದ್ಧ.