ಬೇಕಾಗುವ ಸಾಮಾಗ್ರಿಗಳು : ಉದ್ದಿನಬೇಳೆ, ತೆಂಗಿನತುರಿ, ಗೋಧಿ ರವೆ, ನೀರುಳ್ಳಿ, ಕರಿಬೇವಿನ ಸೊಪ್ಪು, ಶುಂಠಿ, ಹಸಿಮೆಣಸು, ಕೊತ್ತಂಬರಿ, ಓಮಕಾಳು, ಜೀರಿಗೆ, ಎಣ್ಣೆ.
ಪಾಕ ವಿಧಾನ: ಉದ್ದಿನ ಬೇಳೆಯನ್ನು ಚೆನ್ನಾಗಿ ನೆನೆಸಿ. ಅದಕ್ಕೆ ಜೀರಿಗೆ, ಕೊತ್ತಂಬರಿ, ಓಮಕಾಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಬ್ಬಿದ ಹಿಟ್ಟಿಗೆ ನೆನೆಸಿದ ಗೋಧಿ ರವೆಯನ್ನು ಬೆರೆಸಿ ಸ್ವಲ್ಪ ನೀರು ಸೇರಿಸಿ. ಸಣ್ಣಗೆ ಹೆಚ್ಚಿದ ನೀರುಳ್ಳಿ, ಕರಿಬೇವಿನ ಸೊಪ್ಪು, ಶುಂಠಿ, ಹಸಿಮೆಣಸಿನಕಾಯಿ ಎಲ್ಲವನ್ನೂ ಹಾಕಿ ಚೆನ್ನಾಗಿ ಬೆರೆಸಿ. ನಂತರ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.