Article Sweets Recipes In Kannada %e0%b2%86%e0%b2%b2%e0%b3%82%e0%b2%97%e0%b2%a1%e0%b3%8d%e0%b2%a1%e0%b3%86 %e0%b2%95%e0%b3%87%e0%b2%95%e0%b3%8d 109071800093_1.htm

Daily Horoscope

Select Your Language

Notifications

webdunia
webdunia
webdunia
webdunia

ಆಲೂಗಡ್ಡೆ ಕೇಕ್

ಆಲೂಗಡ್ಡೆ ಕೇಕ್
ಬೇಕಾಗುವ ಪದಾರ್ಥಗಳು- ಆಲೂಗಡ್ಡೆ - ಅರ್ಧ ಕೆಜಿ, ಸಕ್ಕರೆ - 1 ಕೆಜಿ, ಸಕ್ಕರೆ ರಹಿತ ಖೋವಾ - 125 ಗ್ರಾಂ, ತುಪ್ಪ - ಅರ್ಧ ಕಪ್, ಏಲಕ್ಕಿಪುಡಿ - ಸ್ವಲ್ಪ, ಪಚ್ಚೆ ಕರ್ಪೂರ - ಸ್ವಲ್ಪ, ಕೇಸರಿ ದಳ- 10, ಕೇಸರಿಬಣ್ಣ - 1 ಚಿಟಿಕೆ.

ಮಾಡುವ ವಿಧಾನ- ಮೊದಲು ಅಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ಸುಲಿದು, ಗಂಟುಗಳಿಲ್ಲದೇ ಪುಡಿಮಾಡಿಟ್ಟುಕೊಳ್ಳಿ. ಖೋವಾವನ್ನು ಪುಡಿಮಾಡಿದ ಅಲೂಗಡ್ಡೆಯೊಂದಿಗೆ ಸೇರಿಸಿ ಚೆನ್ನಾಗಿ ಬೆರೆಸಿಡಿ. ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸಕ್ಕರೆ ಹಾಕಿ, ಅದು ಮುಳುಗುವಷ್ಟು ನೀರನ್ನು ಹಾಕಿ. ಸರಿಯಾಗಿ ಸಕ್ಕರೆ ಪಾಕ ಬಂದ ನಂತರ ಇದಕ್ಕೆ ಅಲೂಗಡ್ಡೆ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ, ಒಲೆಯ ಮೇಲಿಟ್ಟು ಮತ್ತೊಮ್ಮೆ ಚೆನ್ನಾಗಿ ಕಲಸಿರಿ. ಇದಕ್ಕೆ ತುಪ್ಪವನ್ನು ಸೇರಿಸಿ ಬಾಣಲೆಯಿಂದ ಬೇರ್ಪಡುವವರೆಗೆ ಕಲಸುತ್ತಾ ಇರಿ. ನಂತರ ಇದಕ್ಕೆ ಬಣ್ಣ, ಏಲಕ್ಕಿಪುಡಿ, ಪಚ್ಚಕರ್ಪೂರದ ಪುಡಿ, ಬಿಸಿ ಹಾಲಿನಲ್ಲಿ ಕರಗಿಸಿದ ಕೇಸರಿಹೂಗಳನ್ನು ಚೆನ್ನಾಗಿ ಬೆರೆಸಿ. ಕೊನೆಯಲ್ಲಿ ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಸುರಿದು, ಆರಿದ ನಂತರ ತುಂಡುಗಳಾಗಿ ಕತ್ತರಿಸಿ.

Share this Story:

Follow Webdunia kannada