Article Sweets Recipes In Kannada %e0%b2%86%e0%b2%b2%e0%b3%82 %e0%b2%b9%e0%b2%b2%e0%b3%8d%e0%b2%b5 110021800072_1.htm

Select Your Language

Notifications

webdunia
webdunia
webdunia
webdunia

ಆಲೂ ಹಲ್ವ

ಅಡುಗೆ
ಬೇಕಾಗುವ ಸಾಮಗ್ರಿ- ಆರು ಆಲುಗಡ್ಡೆ, ಸಕ್ಕರೆ ಒಂದುವರೆ ಕಪ್, ತುಪ್ಪ ಮುಕ್ಕಾಲು ಕಪ್, ಒಣದ್ರಾಕ್ಷಿ ಒಂದು ಚಮಚ, ಬಾದಾಮಿ ಹತ್ತು, ಏಲಕ್ಕಿ ಪುಡಿ ಸ್ವಲ್ಪ, ಕಾಯಿತುರಿ ಅರ್ಧ ಕಪ್, ನೀರು ಕಾಲು ಕಪ್.
ಮಾಡುವ ವಿಧಾನ- ಆಲುಗಡ್ಡೆಯನ್ನು ತೊಳೆದು ಬೇಯಿಸಿ, ಸಿಪ್ಪೆ ಸುಲಿದು ಪುಡಿ ಮಾಡಿ. ತುಪ್ಪ ಬಿಸಿ ಮಾಡಿ ಬೆಂದ ಆಲುಗಡ್ಡೆಯನ್ನು ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಸಕ್ಕರೆಯನ್ನು ಆಲುಗಡ್ಡೆಗೆ ಬೆರೆಸಿ ಕದಡಿ, ದ್ರಾಕ್ಷಿ, ಕಾಯಿತುರಿ, ಬಾದಾಮಿ ಸೇರಿಸಿ ಕೈಯಾಡಿಸಿ. ಏಲಕ್ಕಿ ಪುಡಿ ಸೇರಿಸಿ, ನೀರು ಸೇರಿಸಿ ಎರಡು ನಿಮಿಷ ಚೆನ್ನಾಗಿ ಕದಡಿ. ಆಲೂ ಹಲ್ವ ರೆಡಿ.

Share this Story:

Follow Webdunia kannada