ಬೇಕಾಗುವ ಸಾಮಗ್ರಿ- ಆಲೂಗಡ್ಡೆ ಕಾಲು ಕೆಜಿ, ಖೋವಾ 100 ಗ್ರಾಂ, ಮೈದಾ ಹಿಟ್ಟು ಸ್ವಲ್ಪ, ಸಕ್ಕರೆ ಅರ್ಧ ಕಪ್, ಏಲಕ್ಕಿ ಪುಡಿ ಒಂದು ಚಮಚ, ಒಣ ಕೊಬ್ಬರಿ ತುರಿ ಕಾಲು ಕಪ್, ಕರಿಯಲು ಎಣ್ಣೆ.
ಮಾಡುವ ವಿಧಾನ- ಆಲೂಗಡ್ಡೆಯನ್ನು ಮೆತ್ತಗೆ ಬೇಯಿಸಿ ಸಿಪ್ಪೆ ತೆಗೆದು ಖೋವಾದೊಂದಿಗೆ ಸೇರಿಸಿ ಚೆನ್ನಾಗಿ ಹದ ಮಾಡಿ. ಮೈದಾಹಿಟ್ಟು ಸ್ವಲ್ಪ ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಎಣ್ಣೆಯನ್ನು ಕಾಯಲು ಇಟ್ಟು ಕಲಸಿಕೊಂಡ ಮಿಶ್ರಣದಿಂದ ಜಾಮೂನಿನಂತೆ ಮಾಡಿ ಹದವಾದ ಉರಿಯಲ್ಲಿ ಕರಿದು ಪುಡಿ ಮಾಡಿದ ಸಕ್ಕರೆ ಕೊಬ್ಬರಿ ತುರಿ, ಏಲಕ್ಕಿಯ ಮಿಶ್ರಣದಲ್ಲಿ ಆಲೂ ಬಾಲ್ಸ್ ಗಳನ್ನು ಚೆನ್ನಾಗಿ ಉರುಳಿಸಿ. ಆಲೂ ಬಾಲ್ಸ್ ರೆಡಿ.