Article Sweets Recipes In Kannada %e0%b2%86%e0%b2%aa%e0%b2%b2%e0%b3%8d %e0%b2%96%e0%b3%80%e0%b2%b0%e0%b3%81 109091200075_1.htm

Select Your Language

Notifications

webdunia
webdunia
webdunia
webdunia

ಆಪಲ್ ಖೀರು

ಆಪಲ್ ಖೀರು
ಬೇಕಾಗುವ ಸಾಮಗ್ರಿ- ಒಂದು ಲೀಟರ್ ಹಾಲು, ನಾಲ್ಕು ಆಪಲ್, ಕಾಲು ಚಮಚ ಏಲಕ್ಕಿ, ನಾಲ್ಕು ಬಾದಾಮಿ, ನಾಲ್ಕು ಚಮಚ ಸಕ್ಕರೆ, ಐದು ಪಿಸ್ತಾ.

ಮಾಡುವ ವಿಧಾನ: ಅಗಲವಾದ ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ. ಹದ ಉರಿಯಲ್ಲಿಟ್ಟು ಹಾಲನ್ನು ಅರ್ಧ ಲೀಟರ್ ಆಗುವವರೆಗೆ ಬತ್ತಲು ಬಿಡಿ. ಸಕ್ಕರೆ ಸೇರಿಸಿ ಕಡಿಮೆ ಉರಿಯಲ್ಲಿ ತಿರುವುತ್ತಾ ಇರಿ. ಸಿಪ್ಪೆ ತೆಗೆದು ತುರಿದ ಆಪಲ್ ಚೂರುಗಳನ್ನು ಇದಕ್ಕೆ ಹಾಕಿ ನಾಲ್ಕು ನಿಮಿಷ ಬೇಯಲು ಬಿಡಿ. ಏಲಕ್ಕಿ ಪುಡಿ ಹಾಕಿ. ಬಾದಾಮಿ ಹಾಗೂ ಪಿಸ್ತಾ ಸೇರಿಸಿ ಬೇರೆ ಪಾತ್ರೆಗೆ ಹಾಕಿ ಬಿಸಿ ಬಿಸಿಯಾಗಿ ಅಥವಾ ತಣ್ಣಗೆ ಮಾಡಿ ತಿನ್ನಲು ಕೊಡಿ.

Share this Story:

Follow Webdunia kannada