Article Sweets Recipes In Kannada %e0%b2%85%e0%b2%ae%e0%b3%83%e0%b2%a4 %e0%b2%aa%e0%b3%87%e0%b2%a1%e0%b2%be 109100900062_1.htm

Select Your Language

Notifications

webdunia
webdunia
webdunia
webdunia

ಅಮೃತ ಪೇಡಾ

ಅಮೃತ ಪೇಡಾ
ಬೇಕಾಗುವ ಸಾಮಗ್ರಿ: ಒಂದು ಕಪ್ ತುರಿದ ಖೋವಾ, ಕಾಲು ಕಪ್ ಸಕ್ಕರೆ ಪುಡಿ, ಅರ್ಧ ಚಮಚ ಏಲಕ್ಕಿ ಪುಡಿ, ಕಾಲು ಕಪ್ ಪಿಸ್ತಾ, ಕೇಸರಿ ಸ್ವಲ್ಪ.

ಮಾಡುವ ವಿಧಾನ: ಪಿಸ್ತಾವನ್ನು ಹದ ಬಿಸಿನೀರಿನಲ್ಲಿ ಅರ್ಧ ಗಂಟೆ ನೆನೆಸಿದ ನಂತರ ನೀರು ಚೆಲ್ಲಿ ಸಣ್ಣಗೆ ಹಚ್ಚಿಡಿ. ದಪ್ಪ ತಳದ ಪಾತ್ರೆಯಲ್ಲಿ ಖೋವಾ, ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿ ಸಕ್ಕರೆ ಕರಗುವವರೆಗೆ ತಿರುವಿ. ನಂತರ ಪಾತ್ರೆಯನ್ನು ಕೆಳಗಿಳಿಸಿನಂತರ ಏಲಕ್ಕಿ ಪುಡಿ ಹಾಕಿ ತಣಿಯಲು ಬಿಡಿ. ನಂತರ ಇದರ ಮೂರನೇ ಒಂದು ಭಾಗ ಬೇರ್ಪಡಿಸಿ ಅದಕ್ಕೆ ಪಿಸ್ತಾದ ಚೂರುಗಳನ್ನು ಹಾಕಿ. ಉಳಿದ ಮೂರನೇ ಎರಡು ಭಾಗಕ್ಕೆ ಕೇಸರಿ ಸೇರಿಸಿ. ಎರಡೂ ಮಿಶ್ರಣವನ್ನು ಪ್ರತ್ಯೇಕವಾಗಿ ಎಂಟು ಭಾಗವಾಗಿ ವಿಂಗಡಿಸಿ ಎಂಟೆಂಟು ಉಂಡೆಗಳನ್ನಾಗಿ ಮಾಡಿ. ಕೇಸರಿ ಉಂಡೆಯನ್ನು ತಟ್ಟಿ ಅದರ ನಡುವೆ ಪಿಸ್ತಾ ಉಂಡೆಯನ್ನಿಟ್ಟು ಮುಚ್ಚಿ ಮೆತ್ತಗೆ ಒತ್ತಿ. ಅಚ್ಚುಗಳಿದ್ದರೆ ಅಚ್ಚಿನ್ಲಲೂ ಒತ್ತಬಹುದು. ಅಮೃತ ಪೇಡಾ ರೆಡಿ.

Share this Story:

Follow Webdunia kannada