Article Sweets Recipes In Kannada %e0%b2%85%e0%b2%a8%e0%b2%a8%e0%b2%be%e0%b2%b8%e0%b3%81 %e0%b2%95%e0%b2%9f%e0%b3%8d%e0%b2%b2%e0%b2%bf 109101600065_1.htm

Select Your Language

Notifications

webdunia
webdunia
webdunia
webdunia

ಅನನಾಸು ಕಟ್ಲಿ

ಅನನಾಸು ಕಟ್ಲಿ
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅನನಾಸಿನ ತುಂಡುಗಳು, ಅರ್ಧ ಕಪ್ ಸಕ್ಕರೆ, ಮುಕ್ಕಾಲು ಕಪ್ ಗೋಡಂಬಿ ಪುಡಿ, ಏಲಕ್ಕಿ ಪುಡಿ ಸ್ವಲ್ಪ, ಚಿಕಿಕೆಯಷ್ಟು ಕೇಸರಿ, ನಾಲ್ಕು ಚಮಚ ತುಪ್ಪ.
ಮಾಡುವ ವಿಧಾನ: ಅನನಾಸಿನ ಹೋಲುಗಳಿಗೆ ಮೂರು ದೊಡ್ಡ ಚಮಚ ನೀರು ಸೇರಿಸಿ ಐದು ನಿಮಿಷ ಬೇಯಿಸಿ. ಸ್ವಲ್ಪ ತಣಿಸಿ, ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ಅನನಾಸಿನ ಪ್ಯೂರಿ ಸಿದ್ಧವಾಯಿತು. ದಪ್ಪ ತಳದ ಪಾತ್ರೆಯಲ್ಲಿ ಈ ಪ್ಯೂರಿ ತೆಗೆದುಕೊಂಡು ಸಕ್ಕರೆ ಸೇರಿಸಿ ಒಲೆ ಮೇಲಿಡಿ. ಸಕ್ಕರೆ ಕರಗಿ ಮಿಶ್ರಣ ದಪ್ಪಗಾಗುವವರೆಗೆ ಮಗುಚುತ್ತಿರಿ. ಸಣ್ಣ ಉರಿಯಲ್ಲಿರಲಿ. ಗೋಡಂಬಿ ಪುಡಿ, ಏಲಕ್ಕಿ, ಕೇಸರಿ ಸೇರಿಸಿ 10 ನಿಮಿಷ ಮತ್ತೆ ಒಲಯಲ್ಲೇ ಹಾಗೇ ಬಿಡಿ. ತಿರುವುತ್ತಾ ಇರಿ. ತುಪ್ಪ ಸವರಿದ ತಟ್ಟೆಯಲ್ಲಿ ಹರಡಿ. ತಣಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ.

Share this Story:

Follow Webdunia kannada