ಬೇಕಾಗುವ ಸಾಮಾಗ್ರಿಗಳು:
ಅಕ್ಕಿ, ತೆಂಗಿನತುರಿ, ಜೀರಿಗೆ, ಒಣಮೆಣಸಿನಕಾಯಿ, ಧನಿಯಾ, ಎಣ್ಣೆ
ಪಾಕ ವಿಧಾನ: ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿಡಿ. ನೆನೆದ ಅಕ್ಕಿಗೆ ತೆಂಗಿನತುರಿ, ಜೀರಿಗೆ, ಒಣಮೆಣಸಿನಕಾಯಿ, ಧನಿಯಾ, ಉಪ್ಪು, ಎಲ್ಲವನ್ನು ಸೇರಿಸಿ ಚೆನ್ನಾಗಿ ರುಬ್ಬಿ. ಒಲೆಯ ಮೇಲೆ ದಪ್ಪ ತಳದ ಪಾತ್ರೆಯಿಟ್ಟು, ರುಬ್ಬಿಕೊಂಡ ಅಕ್ಕಿಹಿಟ್ಟನ್ನು ಹಾಕಿ ಕೆಂಪಗೆ ಗಟ್ಟಿಯಾಗುವವರಗೂ ಹುರಿಯಿರಿ. ನಂತರ ಸಣ್ಣ ಗಾತ್ರದ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಹದವಾಗಿ ಕರಿಯಿರಿ.