ಬೇಕಾಗುವ ಸಾಮಗ್ರಿ: ಒಂದು ಕೆಜಿ ಮಾವಿನಹಣ್ಣು, ಅರ್ಧ ಕೆಜಿ ಬೆಲ್ಲ, ಲವಂಗ
ಮಾಡುವ ವಿಧಾನ: ಮಾವಿನ ಹಣ್ಣಿನ ಸಿಪ್ಪೆ ಸುಲಿದು ತುಂಡುಗಳಾಗಿ ಕತ್ತರಿಸಿ ಮೆತ್ತಗಾಗುವವರೆಗೆ ಬೇಯಿಸಿ. ಇನ್ನೊಂದು ಪಾತ್ರೆಯ್ಲಲಿ ಬೆಲ್ಲವನ್ನು ಚೂರುಗಳಾಗಿ ಮಾಡಿ ಸ್ವಲ್ಪ ನೀರು ಹಾಕಿ ಒಲೆಯ ಮೇಲಿಟ್ಟು ಕರಗಲು ಬಿಡಿ. ಬೆಲ್ಲ ಕರಗಿದ ಮೇಲೆ ಅದಕ್ಕೆ ಮಾವಿನಹಣ್ಣಿನ ತುಂಡುಗಳನ್ನು ಸೇರಿಸಿ ಸುಮಾರು ಹತ್ತು ನಿಮಿಷ ತಟ್ಟೆ ಮುಚ್ಚಿ ಬೇಯಿಸಿ. ನಂತರ ತಟ್ಟೆ ತೆಗೆದು ದಪ್ಪ ಸಿರಪ್ ಆಗುವಂತೆ ಒಲೆಯಲ್ಲೇ ಬಿಡಿ. ತಿರುವುತ್ತಾ ಇರಿ. ನಂತರ ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ಫ್ರಿಡ್ಜ್‌ನಲ್ಲಿಟ್ಟು ಕೂಲ್ ಆದ ಅಂಬಾಲಕಲ್ಯ ತಿನ್ನಲು ಬಲು ರುಚಿ.