ರವಾ ಮಾವನಹಣ್ಣಿನ ಶೀರ: ಮಾವಿನ ಹಣ್ಣಿನ ಸಿಪ್ಪೆತೆಗೆದು ಚೆನ್ನಾಗಿ ಕತ್ತರಿಸಿಡಿ. ಸ್ವಲ್ಪ ಕುಂಕುಮ ಕೇಸರಿಯನ್ನು ಕಾಲು ಕಪ್ ಬಿಸಿ ಹಾಲಿನಲ್ಲಿ ಹಾಗೆಯೇ ಕೆಲವು ನಿಮಿಷಗಳ ಕಾಲ ನೆನೆಸಿಡಿ. ಆಳವಾದ ಪಾತ್ರೆ ಅಥವಾ ಕಡಾಯಿಯಲ್ಲಿ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ. ಅದಕ್ಕೆ ರವೆಯನ್ನು ಹಾಕಿ ಅದು ತಿಳಿ ಕೆಂಬಣ್ಣಕ್ಕೆ ತಿರುಗುವವರೆಗೆ ತಿರುವುತ್ತಾ ಇರಿ. ಅದಕ್ಕೆ ಹಾಲನ್ನು ಸೇರಿಸಿ ಹಾಗೆಯೇ ತಿರುವುತ್ತಾ ಇರಿ. ನಂತರ ಅದಕ್ಕೆ ಸಕ್ಕರೆ ಹಾಗೂ ಮಾವಿನ ಹಣ್ಣಿನ ತುಂಡುಗಳನ್ನು ಸೇರಿಸಿ. ಮಾವಿನ ಹಣ್ಣಿನ ತುಂಡುಗಳು ಹಾಗೆಯೇ ರವೆ ಹಾಗೂ ಹಾಲಿನ ಜತೆ ಚೆನ್ನಾಗಿ ಮಿಶ್ರಣವಾಗುವವರೆಗೂ ತಿರುವುತ್ತಾ ಇರಿ. ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ. ಕತ್ತರಿಸಿದ ಡ್ರೈಫ್ರುಟ್ಸ್, ಬೀಜಗಳನ್ನು ಅದಕ್ಕೆ ಮತ್ತೆ ಸೇರಿಸಿ ಹಾಗೆಯೇ ಹಿಸಿ ಬಿಸಿಯಾಗಿ ತಿನ್ನಲು ಕೊಡಿ.