Select Your Language

Notifications

webdunia
webdunia
webdunia
webdunia

ಬಾದಾಮಿ ಶೀರ

ಬಾದಾಮಿ ಶೀರ
ಬೇಕಾಗುವ ಸಾಮಗ್ರಿ: ಒಂದುವರೆ ಕಪ್ ಬಾದಾಮಿ, ಮೂರು ಕಪ್ ಬಿಸಿ ಹಾಲು, 250 ಗ್ರಾಂ ತುಪ್ಪ, ಅರ್ಧ ಕಪ್ ಸಕ್ಕರೆ. ಮಾಡುವ ವಿಧಾನ: ಬಾದಾಮಿಯ ಸಿಪ್ಪೆ ಸುಲಿದು ತೊಳೆದಿಡಿ. ಇದ್ನು ಚೆನ್ನಾಗಿ ಮಿಕ್ಸಿಯಲ್ಲಿ ಅರೆದು ಪೇಸ್ಟ್ ಮಾಡಿ. ತುಪ್ಪದಲ್ಲಿ ಈ ಪೇಸ್ಟನ್ನು ಹಾಕಿ ಫ್ರೈ ಮಾಡಿ. ಈ ಪೇಸ್ಟ್ ತಿಳಿ ಕಂದು ಬಣ್ಣ ಬಂದ ತಕ್ಷಣ ಸ್ವಲ್ಪ ಸ್ವಲ್ಪವೇ ಬಿಸಿ ಹಾಲನ್ನು ಸೇರಿಸುತ್ತಾ ಬನ್ನಿ. ಜತೆಗೇ ತಿರುವುತ್ತಾ ಇರಿ. ಈ ಮಿಶ್ರಣ ದಪ್ಪಗಾಗುತ್ತಾ ಬಂದಾಗ ಸಕ್ಕರೆ ಸೇರಿಸಿ ಮತ್ತೆ ತಿರುವುತ್ತಾ ಒಲೆಯಲ್ಲೇ ಇಡಿ. ಗಟ್ಟಿಯಾಗುತ್ತಾ ಬಂದ ಮೇಲೆ ಒಲೆಯಿಂದ ಇಳಿಸಿ ತುಪ್ಪ ಸವರಿದ ಬಟ್ಟಲಲ್ಲಿ ಹರವಿ. ಬಾದಾಮಿ ಶೀರ ರೆಡಿ.

Share this Story:

Follow Webdunia kannada