Publish Date: Sun, 15 Jan 2017 (17:27 IST)
Updated Date: Sun, 15 Jan 2017 (17:31 IST)
ನವದೆಹಲಿ: ವರದಕ್ಷಿಣೆ ಎನ್ನುವುದು ಭಾರತದಲ್ಲಿ ಸಾಮಾಜಿಕ ಪಿಡುಗು. ಜನವರಿ 16 ರಂದು ವಿವಾಹವಾಗಲಿರುವ ಕುಸ್ತಿ ಪಟು ಯೋಗೇಶ್ವರ್ ದತ್ ಕೂಡಾ ವರದಕ್ಷಿಣೆ ಪಡೆದಿದ್ದಾರೆ. ಆದರೆ ಅದರ ಮೊತ್ತ ಕೇಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾದೀತು.
ಹರ್ಯಾಣಾದ ಕಾಂಗ್ರೆಸ್ ನಾಯಕ ಜೈಭಗ್ವಾನ್ ಶರ್ಮಾ ಪುತ್ರಿ ಶೀತಲ್ ಎಂಬವರ ಕೈ ಹಿಡಿಯಲಿದ್ದಾರೆ ಯೋಗೇಶ್ವರ್. ತಮ್ಮ ಕ್ರೀಡೆಯ ಮೂಲಕ ಕೋಟಿಗಟ್ಟಲೆ ಜನರ ಹೃದಯ ಗೆದ್ದ ಯೋಗೇಶ್ವರ್ ವರದಕ್ಷಿಣೆ ವಿಚಾರದಲ್ಲಿ ಕೋಟಿ ರೂಪಾಯಿ ಪಡೆದಿಲ್ಲ. ಅವರು ಪಡೆದಿದ್ದು ಕೇವಲ ಒಂದು ರೂಪಾಯಿ.
ಆ ಮೂಲಕ ವರದಕ್ಷಿಣೆ ವಿಚಾರದಲ್ಲಿ ದೇಶದ ಜನರಿಗೆ ಮಾದರಿಯಾಗಿದ್ದಾರೆ. “ನಾನು ನನ್ನ ಕುಟುಂಬದ ಹುಡುಗಿಯರಿಗೆ ವರದಕ್ಷಿಣೆ ಕೊಡಲು ಹಣ ಹೊಂದಿಸಲು ಹೆಣಗಾಡುತ್ತಿದ್ದುದನ್ನು ನಾನು ನೋಡಿದ್ದೇನೆ. ನನ್ನ ಕನಸು ಇಂದು ನನಸಾಗಿದೆ” ಎಂದು ಯೋಗೇಶ್ವರ್ ಹೇಳಿಕೊಂಡಿದ್ದಾರೆ. ಯೋಗೇಶ್ವರ್ ತಾಯಿ ಜೈಭಗ್ವಾನ್ ಅವರಿಂದ ವರದಕ್ಷಿಣೆ ರೂಪದಲ್ಲಿ ಒಂದು ರೂಪಾಯಿ ಪಡೆದುಕೊಂಡು ಆದರ್ಶ ಮೆರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ