Webdunia - Bharat's app for daily news and videos

Install App

ರಿಯೊದಲ್ಲಿ ಎರಡನೇ ಒಲಿಂಪಿಕ್ ಪದಕದ ಗುರಿ ಹೊಂದಿರುವ ಯೋಗೇಶ್ವರ್

Webdunia
ಗುರುವಾರ, 11 ಆಗಸ್ಟ್ 2016 (18:41 IST)
ಯೋಗೇಶ್ವರ್ ದತ್ ಒಂದು ದಶಕದಿಂದ ಭಾರತದ ಪರ ಸ್ಪರ್ಧಿಸುತ್ತಿದ್ದು, ಇತ್ತೀಚೆಗೆ ತಾನೆ ಅವರು ಹಿರಿಯ ಕ್ರೀಡಾಪಟು ಎಂಬ ಸ್ಥಾನಮಾನ ಸಾಧಿಸಿದ್ದಾರೆ. ರಿಯೊ ಒಲಿಂಪಿಕ್ಸ್‌ಗೆ ತಂಡದಲ್ಲಿ ಸುಶೀಲ್ ಕುಮಾರ್ ಇಲ್ಲದಿರುವ ಹಿನ್ನೆಲೆಯಲ್ಲಿ ಯೋಗೇಶ್ವರ್ ತಂಡದ ಅತೀ ಹಿರಿಯ ಸದಸ್ಯರಾಗಿದ್ದಾರೆ. ಹರ್ಯಾಣದ ಸೋನೆಪೇಟೆ ತರಬೇತಿ ಶಿಬಿರದಲ್ಲಿ ಯೋಗೀಶ್ವರ್ ಕುಸ್ತಿ ಹಾಲ್‌ಗೆ ಪ್ರವೇಶಿಸುತ್ತಿದ್ದಂತೆ ಯುವ ಕುಸ್ತಿಪಟುಗಳು ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ. ಈ ಕುಸ್ತಿ ಹಾಲ್ ಯೋಗಿ ಮತ್ತು ಸುಶೀಲ್ ಕುಮಾರ್ ಹೆಸರಿನಲ್ಲಿದೆ.
 
 ಲಂಡನ್‌ನಲ್ಲಿ ನಾಲ್ಕು ವರ್ಷಗಳ ಹಿಂದೆ ಯೋಗಿ ಕೆ.ಡಿ.ಜಾಧವ್ ಮತ್ತು ಸುಶೀಲ್ ಕುಮಾರ್ ಬಳಿಕ ಯೋಗೇಶ್ವರ್ ಪದಕ ಗೆದ್ದ ಮೂರನೇ ಭಾರತೀಯ ಕುಸ್ತಿಪಟುವಾಗಿದ್ದರು. ಆಗಿನಿಂದ ಪರಿಸ್ಥಿತಿ ಬದಲಾಗಿದೆ. ಉದಾಹರಣೆಗೆ ಅವರೀಗ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.
 
ಕಾಲಾಂತರದಲ್ಲಿ ಯೋಗೇಶ್ವರ್ ತಮ್ಮ ತೂಕದ ವಿಭಾಗವನ್ನು ಬದಲಿಸಿದ್ದಾರೆ. ಅವರ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಒಲಿಂಪಿಕ್ ಪದಕಗಳು 2010 ಮತ್ತು 2012ರಲ್ಲಿ 60 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ದಕ್ಕಿದೆ. ಆದರೆ ತಮ್ಮ 65 ಕೆಜಿ ತೂಕದ ವಿಭಾಗಕ್ಕೆ ಹೊಂದಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳದೇ 2014ರ ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.
 
 ರಿಯೊನಲ್ಲಿ ಸ್ಪರ್ಧಿಸುತ್ತಿರುವ ಯೋಗೇಶ್ವರ್ ಉತ್ತಮ ಫಾರಂನಲ್ಲಿದ್ದು ಒಲಿಂಪಿಕ್ ಅರ್ಹತಾ ಈವೆಂಟ್‌ನಲ್ಲಿ ಚಿನ್ನ ಗೆದ್ದಿದ್ದರು. ರಿಯೊದಲ್ಲಿ ಯಶಸ್ವಿಯಾದರೆ ಸುಶೀಲ್ ಬಳಿಕ ಎರಡನೇ ವೈಯಕ್ತಿಕ ಚಿನ್ನದ ಪದಕ ಗಳಿಸುವ ಗೌರವಕ್ಕೆ ಅವರು ಪಾತ್ರರಾಗಲಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli: ಪತಿ ನಿವೃತ್ತಿ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿದ ಅನುಷ್ಕಾ ಶರ್ಮಾ

Virat Kohli: ಟೆಸ್ಟ್‌ಗೆ ವಿದಾಯ ಘೋಷಿಸುವ ಕೆಲ ಕ್ಷಣಗಳ ಮುಂಚೆ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದು ಎಲ್ಲಿ ಗೊತ್ತಾ

Virat Kohli, ಪರಂಪರೆ ಶಾಶ್ವತವಾಗಿ ಮುಂದುವರಿಯುತ್ತದೆ: ಬಿಸಿಸಿಐ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ರದರ್ಸ್ ಫ್ರಂ ಎನದರ್ ಮದರ್

Virat Kohli: ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನಿವೃತ್ತಿ

ಮುಂದಿನ ಸುದ್ದಿ
Show comments