ಮುಂಬೈ: ಭಾರತ ಕ್ರಿಕೆಟ್ ಗೆ ಸದ್ಯಕ್ಕೆ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ, ಟೆನಿಸ್ ನಲ್ಲಿ ಸಾನಿಯಾ ಮಿರ್ಜಾ ನಂ.1. ಇಂತಿಪ್ಪ ಸಾನಿಯಾ ಕ್ರಿಕೆಟ್ ಸೂಪರ್ ಸ್ಟಾರ್ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
“ನಾನು ಹಲವು ಬಾರಿ ವಿರಾಟ್ ನನ್ನು ಭೇಟಿಯಾಗಿದ್ದೇನೆ. ಆತ ಸಾಮಾನ್ಯ ಹುಡುಗನಂತೆ ತೋರುತ್ತಾನೆ. ನಾಲ್ಕು ಜನರ ಗುಂಪು ಕಟ್ಟಿಕೊಂಡು ಹೊರಗಡೆ ಹೋದರೆ ನಮ್ಮೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯನಂತೆ ಬೆರೆಯುತ್ತಾರೆ.
ಆದರೆ ಒಬ್ಬ ಚಾಂಪಿಯನ್ ಆಟಗಾರನ ನಿಜವಾದ ಗುಣ ಗೊತ್ತಾಗುವುದು ಮೈದಾನಕ್ಕಿಳಿದಾಗಲೇ. ಕೊಹ್ಲಿ ವಿಚಾರದಲ್ಲೂ ಹಾಗೇ. ಆತನಿಗೆ ಭಯವೆಂಬುದೇ ಇಲ್ಲ. ಆತನ ನಾಯಕತ್ವದ ಗುಣಗಳೇ ಭಾರತ ಕ್ರಿಕೆಟ್ ತಂಡವನ್ನು ಈ ಮಟ್ಟಕ್ಕೆ ಬೆಳೆಸಿರುವುದು” ಎಂದು ಸಾನಿಯಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ನಮ್ಮಿಬ್ಬರ ನಡುವೆ ಹೋಲಿಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ