Select Your Language

Notifications

webdunia
webdunia
webdunia
webdunia

ಪಿವಿ ಸಿಂಧು ಬಗ್ಗೆ ಸೈನಾ ನೆಹ್ವಾಲ್ ಹೇಳಿದ್ದೇನು?

ಪಿವಿ ಸಿಂಧು ಬಗ್ಗೆ ಸೈನಾ ನೆಹ್ವಾಲ್ ಹೇಳಿದ್ದೇನು?
Hyderabad , ಮಂಗಳವಾರ, 20 ಡಿಸೆಂಬರ್ 2016 (11:45 IST)
ಹೈದರಾಬಾದ್: ಸೈನಾ ನೆಹ್ವಾಲ್ ರನ್ನು ಮೀರಿಸುವ ಇನ್ನೊಬ್ಬ ಭಾರತೀಯ ಬ್ಯಾಡ್ಮಿಂಟನ್ ತಾರೆ ಎಂದರೆ ಪಿವಿ ಸಿಂಧು. ಆದರೆ ಇದುವರೆಗೆ ಸೈನಾ ಸಿಂಧು ಬಗ್ಗೆ ಏನೂ ಹೇಳಿದ್ದು ನಾವು ಕೇಳಿರಲಿಲ್ಲ. ಆದರೆ ವಿಶ್ವ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ನ ಸೆಮಿಫೈನಲ್ ನಲ್ಲಿ ಸೋತ ಬಳಿಕ ಸೈನಾ ಸಿಂಧು ಬಗ್ಗೆ ಏನು ಹೇಳಿದರು ಗೊತ್ತಾ?

“ಸಿಂಧು, ಸಮೀರ್ ಭಾರತದ ಬ್ಯಾಡ್ಮಿಂಟನ್ ನ ಭವಿಷ್ಯದ ತಾರೆಗಳು. ಅವರು ಭಾರತದ ಭವಿಷ್ಯವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ. ಇಬ್ಬರೂ ಹಾಂಗ್ ಕಾಂಗ್ ಓಪನ್ ನ ಫೈನಲ್ ತಲುಪಿದ್ದರು. ಇಬ್ಬರೂ ಉತ್ತಮವಾಗಿ ಆಡುತ್ತಿದ್ದಾರೆ” ಎಂದು ಇಬ್ಬರನ್ನೂ ಹೊಗಳಿದ್ದಾರೆ.

ಇದೇ ವೇಳೆ ತಮ್ಮ ಕಳಪೆ ಫಾರ್ಮ್ ಬಗ್ಗೆ ಮಾತನಾಡಿರುವ ಸೈನಾ ಮುಂದಿನ ಜನವರಿ ವೇಳೆಗೆ ಮತ್ತೆ ಹಳಿಗೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಹರಾಜಿಗಿದ್ದಾರೆ ಖ್ಯಾತ ಆಟಗಾರರು