Select Your Language

Notifications

webdunia
webdunia
webdunia
webdunia

ಸೈನಾ-ಸಿಂಧು ವೈರತ್ವದ ಬಗ್ಗೆ ಕೋಚ್ ಗೋಪಿಚಂದ್ ಹೇಳಿದ್ದೇನು?

ಸೈನಾ-ಸಿಂಧು ವೈರತ್ವದ ಬಗ್ಗೆ ಕೋಚ್ ಗೋಪಿಚಂದ್ ಹೇಳಿದ್ದೇನು?
NewDelhi , ಗುರುವಾರ, 11 ಮೇ 2017 (08:13 IST)
ನವದೆಹಲಿ: ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ದೇಶದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿಯರು. ಇಬ್ಬರೂ ಬ್ಯಾಡ್ಮಿಂಟನ್ ಅಂಗಣದಲ್ಲಿ ಒಬ್ಬರನ್ನೊಬ್ಬರು ಸೋಲಿಸಬೇಕೆನ್ನುವ ಕೆಚ್ಚು ಹೊಂದಿರುವ ಆಟಗಾರ್ತಿಯರು.

 
ಇಬ್ಬರೂ ಯಾವತ್ತೂ ಮಾತಿನ ಮೂಲಕ ಕಿತ್ತಾಡಿಕೊಂಡಿದ್ದಿಲ್ಲ. ಆದರೂ ಇಬ್ಬರ ನಡುವೆ ವೈಷಮ್ಯವಿರುವಂತೇ ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ ಇವರಿಬ್ಬರ ನಡುವೆ ಇರುವುದು ಹೋರಾಡುವ ವೈರತ್ವವಷ್ಟೇ. ಇದರ ಬಗ್ಗೆ ಕೋಚ್ ಗೋಪಿಚಂದ್ ಹೇಳಿದ್ದೇನು?

‘ನನಗೆ ಖುಷಿಯಿದೆ. ಇಂತಹ ಕೆಚ್ಚು ಉತ್ತಮ ಆಟವಾಡಲು ಪ್ರೇರೇಪಿಸುತ್ತದೆ’ ಎಂದಿದ್ದಾರೆ ಗೋಪಿ. ಮೊನ್ನೆಯಷ್ಟೇ ಇವರಿಬ್ಬರೂ ತಮ್ಮ ಭಾರತ್ ಪೆಟ್ರೋಲಿಯಂ ತಂಡದ ಪರ ಜತೆಯಾಗಿ ಆಡಿದ್ದರು.

ಈ ಸಂದರ್ಭದಲ್ಲಿ ತಮ್ಮ ಮಾಜಿ ಶಿಷ್ಯೆಯ ಕಳಪೆ ಫಾರ್ಮ್ ನ ಬಗ್ಗೆ ಗೋಪಿಚಂದ್ ಅನುಕಂಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆಕೆ ಖಂಡಿತಾ ಮರಳಿ ಫಾರ್ಮ್ ಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐಗೆ ದ. ಆಫ್ರಿಕಾ ಕ್ರಿಕೆಟ್ ಮಂಡಳಿಯ ಎಚ್ಚರಿಕೆ!