Select Your Language

Notifications

webdunia
webdunia
webdunia
webdunia

ಬಿಸಿಸಿಐಗೆ ದ. ಆಫ್ರಿಕಾ ಕ್ರಿಕೆಟ್ ಮಂಡಳಿಯ ಎಚ್ಚರಿಕೆ!

ಬಿಸಿಸಿಐಗೆ ದ. ಆಫ್ರಿಕಾ ಕ್ರಿಕೆಟ್ ಮಂಡಳಿಯ ಎಚ್ಚರಿಕೆ!
Johansbargh , ಗುರುವಾರ, 11 ಮೇ 2017 (08:08 IST)
ಜೊಹಾನ್ಸ್ ಬರ್ಗ್: ಬಿಸಿಸಿಐಗೆ ಈಗ ಎಲ್ಲಾ ದಿಕ್ಕುಗಳಿಂದ ಸಂಕಷ್ಟ ಎದುರಾಗಿದೆ. ಅತ್ತ ಪಾಕಿಸ್ತಾನ ಉಭಯ ದೇಶಗಳ ಸರಣಿ ರದ್ದಾಗಿದ್ದಕ್ಕೆ ಕಾನೂನು ಹೋರಾಟಕ್ಕೆ ಮುಂದಾಗಿದ್ದರೆ, ಇತ್ತ ದ. ಆಫ್ರಿಕಾ ಮತ್ತೊಂದು ರೀತಿಯಲ್ಲಿ ಎಚ್ಚರಿಕೆ ನೀಡಿದೆ.

 
ಈ ವರ್ಷಾಂತ್ಯಕ್ಕೆ ಭಾರತ ದ.ಆಫ್ರಿಕಾ ಪ್ರವಾಸ ಮಾಡಬೇಕಿರುವುದನ್ನು ಖಚಿತಪಡಿಸದಿದ್ದರೆ, ಮುಂದಿನ ವರ್ಷ ಐಪಿಎಲ್ ಗೆ ತಮ್ಮ ದೇಶದ ಆಟಗಾರರನ್ನು ಕಳುಹಿಸುವುದಿಲ್ಲ ಎಂದು ಆಫ್ರಿಕಾ ಕ್ರಿಕೆಟ್ ಮಂಡಳಿ ಎಚ್ಚರಿಕೆ ನೀಡಿದೆ.

ಈ ಬಗ್ಗೆ ದ. ಆಫ್ರಿಕಾ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಪತ್ರ ಬರೆದಿದೆ. ಆದರೆ ಪತ್ರಕ್ಕೆ ಉತ್ತರಿಸುವ ಗೋಜಿಗೆ ಬಿಸಿಸಿಐ ಹೋಗಿಲ್ಲ. ಸೂಕ್ತ ಸಮಯ ಬಂದಾಗ ಉತ್ತರಿಸುತ್ತೇವೆ ಎಂದು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹೇಳಿದ್ದಾರೆ.

ಇತ್ತೀಚೆಗೆ ಐಸಿಸಿ ಹೊಸ ಆರ್ಥಿಕ ನೀತಿ ಪರ ದ. ಆಫ್ರಿಕಾ ಮತ ಹಾಕಿತ್ತು. ಇದಕ್ಕೆ ಬಿಸಿಸಿಐ ವಿರೋಧವಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅದೇ ಕಾರಣಕ್ಕೆ ಬಿಸಿಸಿಐ ದ.ಆಫ್ರಿಕಾ ಎಚ್ಚರಿಕೆಯನ್ನು ಕಡೆಗಣಿಸಿದೆ ಎಂಬ ಅನುಮಾನವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳ ಕ್ಷಮೆಯಾಚಿಸಿದ ಕ್ರಿಸ್ ಗೇಲ್