Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ಕ್ಷಮೆಯಾಚಿಸಿದ ಕ್ರಿಸ್ ಗೇಲ್

ಅಭಿಮಾನಿಗಳ ಕ್ಷಮೆಯಾಚಿಸಿದ ಕ್ರಿಸ್ ಗೇಲ್
ಬೆಂಗಳೂರು , ಬುಧವಾರ, 10 ಮೇ 2017 (16:21 IST)
ಸ್ಫೋಟಕ ಆಟಕ್ಕೆ ಹೆಸರಾದ ಜಮೈಕಾದ ಬ್ಯಾಟ್ಸ್`ಮನ್ ಕ್ರಿಸ್ ಗೇಲ್ ಐಪಿಎಲ್`ನಲ್ಲಿ ನೀಡಿದ ಕಳಪೆ ಪ್ರದರ್ಶನಕ್ಕೆ ಆರ್`ಸಿಬಿ ಅಭಿಮಾನಿಗಳ ಕ್ಷಮೆ ಯಾಚಿಸಿದ್ದಾರೆ.

`ನಾನು ಮತ್ತು ನನ್ನ ತಂಡದ ಪ್ರದರ್ಶನದ ಬಗ್ಗೆ ನನಗೆ ತುಂಬಾ ಬೇಸರವಾಗಿದೆ. ನಿಜವಾಗಿಯೂ ಇದು ಹತಾಶೆಯ ಆಟ’ ಎಂದು ಗೇಲ್ ಹೇಳಿದ್ಧಾರೆ.

ಸ್ಫೋಟಕ ಆಟದಿಂದ ಗಮನ ಸೆಳೆಯುತ್ತಿದ್ದ ಗೇಲ್ ಈ ಸರಣಿಯಲ್ಲಿ ಮಕಾಡೆ ಮಲಗಿದ್ದರು. ಮೈದಾನಕ್ಕೆ ಬಂದಷ್ಟೇ ವೇಗದಲ್ಲಿ ಔಟಾಗಿ ಪೆವಿಲಿಯನ್`ಗೆ ತೆರಳುತ್ತಿದ್ದರು. ಗೇಲ್ ಈ ಸರಣಿಯಲ್ಲಿ ಗಳಿಸಿರುವ ಕೇವಲ 152 ರನ್.

`ನನ್ನ ಅಭಿಮಾನಿಗಳ ಬಳಿ ಕ್ಷಮೆ ಕೇಳುತ್ತಿದ್ದೇನೆ. ಕಳಪೆ ಆಟ ನಿಜವಾಗಿಯೂ ನೋವು ತಂದಿದೆ. ನಮಮ ಕಳಪೆ ಆಟದ ಹೊರತಾಗಿಯೂ ಅಭಿಮಾನಿಗಳು ಸ್ಟೇಡಿಯಂಗೆ ಬಂದು ನಮಗೆ ಬೆಂಬಲ ಸೂಚಿಸಿದ್ದು ನಿಜವಾಗಿಯೂ ಅಚ್ಚರಿ. ಮುಂದಿನ ವರ್ಷ ಉತ್ತಮ ಪ್ರದರ್ಶನ ನೀಡುತ್ತೇವೆ’  ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಆಯ್ಕೆಯ ಹಿಂದೆ ಧೋನಿ ಪ್ಲ್ಯಾನ್!