ಬಾಲಿವುಡ್ ಕಣ್ಮಣಿ ಸಲ್ಮಾನ್ ಖಾನ್ ರಿಯೊ ಒಲಿಂಪಿಕ್ಸ್ 2016ಕ್ಕೆ ಸದ್ಭಾವನಾ ರಾಯಭಾರಿಯಾಗಿದ್ದು, ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ದೀಪಾ ಕರ್ಮಾಕರ್ ಅವರ ಮನೋಜ್ಞ ಪ್ರದರ್ಶನ ಕುರಿತು ಪತ್ರಕರ್ತರು ಕೇಳಿದಾಗ ಮುಜುಗರದ ಕ್ಷಣವನ್ನು ಅನುಭವಿಸಿದರು.
ದೀಪಾ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಬಾಲಿವುಡ್‌ನ ಫ್ರೀಕಿ ಅಲಿ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ದೀಪಾ ಪ್ರದರ್ಶನ ಕುರಿತು ಕೇಳಿದಾಗ, ಯಾರು ದೀಪಿಕಾನ, ಅವರು ಚಿನ್ನ ಗೆಲ್ಲಬಹುದೆಂದು ಭಾವಿಸಿದ್ದೆ, ಆದರೆ 8 ನೇ ಸ್ಥಾನ ಪಡೆದರಲ್ಲವೇ ಎಂದು ಸಲ್ಮಾನ್ ಪ್ರಶ್ನಿಸಿದರು.
ಸಲ್ಮಾನ್ ಅವರ ತಪ್ಪಿನ ಬಗ್ಗೆ ವರದಿಗಾರ ಗಮನಸೆಳೆಯುವ ತನಕ ಅವರಿಗೆ ತಪ್ಪಿನ ಅರಿವಿರಲಿಲ್ಲ. ಬಳಿಕ ಅರಿವಾಗಿ ಓ, ಹೌದು ದೀಪ್ತಿ ಎಂದು ಸಲ್ಮಾನ್ ಉದ್ಗರಿಸಿದರು.
22 ವರ್ಷದ ತ್ರಿಪುರಾ ಮೂಲದ ದೀಪಾ ವೈಯಕ್ತಿಕ ವಾಲ್ಟ್ ಫೈನಲ್‌ನಲ್ಲಿ 8 ನೇ ಸ್ಥಾನ ಪಡೆದು ಫೈನಲ್ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ. ಅವರ ಪ್ರುಡುನೋವಾ ಪ್ರದರ್ಶನದ ಮನೋಜ್ಞ ವಿಡಿಯೊ ಕೆಳಗಿದೆ.