ತಮ್ಮ ಪತ್ನಿಯನ್ನು ಕಾರು ಅಪಘಾತದಲ್ಲಿ ಕಳೆದುಕೊಂಡ ಮೇಲೆ ಆಸ್ಟ್ರಿಯನ್ -ಜರ್ಮನ್ ವೇಟ್‌ಲಿಫ್ಟರ್ ಸ್ಟೈನರ್ ತರಬೇತಿಯನ್ನೇ ಬಿಡಬೇಕೆಂದು ಎಣಿಸಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ವಾಗ್ದಾನವನ್ನು ಪತ್ನಿಗೆ ನೀಡಿದ್ದನ್ನು ನೆನಪಿಸಿಕೊಂಡು ತರಬೇತಿಯನ್ನು ಮುಂದುವರಿಸುತ್ತಾರೆ. ಕೊನೆಗೂ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಾಗ ಅದೊಂದು ಭಾವನಾತ್ಮಕ ಕ್ಷಣವಾಗಿತ್ತು.
ತನ್ನ ಪತ್ನಿ ಸೂಸಾನ್ 2007ರಲ್ಲಿ ಕಾರು ಅಪಘಾತದಲ್ಲಿ ದುರಂತ ಸಾವನ್ನಪ್ಪಿದಾಗ ಸ್ಟೈನರ್ ತೀವ್ರ ಶೋಕಕ್ಕೊಳಗಾಗಿದ್ದರು. ವೇಟ್ ಲಿಫ್ಟಿಂಗ್ ತರಬೇತಿಯನ್ನು ಮುಂದುವರಿಸುವುದೇ ಅಥವಾ ಬಿಡುವುದೇ ಎಂಬ ಗೊಂದಲಕ್ಕೆ ಒಳಗಾಗಿದ್ದರು.
ಕೊನೆಗೂ ಪತ್ನಿಗೆ ನೀಡಿದ್ದ ವಾಗ್ದಾನ ಈಡೇರಿಸಲು ತರಬೇತಿ ಮುಂದುವರಿಸಿ ಚಿನ್ನದ ಪದಕ ಗೆದ್ದಾಗ ತೀವ್ರ ಬಾವುಕರಾಗಿ ವರ್ತಿಸಿದರು.