Select Your Language

Notifications

webdunia
webdunia
webdunia
webdunia

ಉಸೇನ್ ಬೋಲ್ಟ್ ಶೂ 12 ಲಕ್ಷ ರೂ.ಗೆ ಹರಾಜಿನಲ್ಲಿ ಮಾರಾಟ

ಉಸೇನ್ ಬೋಲ್ಟ್ ಶೂ 12 ಲಕ್ಷ ರೂ.ಗೆ ಹರಾಜಿನಲ್ಲಿ  ಮಾರಾಟ
ಲಂಡನ್: , ಶುಕ್ರವಾರ, 26 ಆಗಸ್ಟ್ 2016 (17:46 IST)
ಜಗತ್ತಿನ ವೇಗದ ಓಟಗಾರ ಉಸೇನ್ ಬೋಲ್ಡ್ ಅವರಿಗೆ ಸೇರಿದ ಸಹಿಮಾಡಿದ ಓಟದ ಶೂ ಅಂತರ್ಜಾಲದ ಮಾರಾಟದಲ್ಲಿ 16000 ಯೂರೊ ಅಥವಾ 12, 06, 758 ರೂಗಳಿಗೆ ಮಾರಾಟವಾಗಿದೆ. 30 ಬಿಡ್‌ಗಳ ನಂತರ ಅಂತಿಮ ಮೊತ್ತವು ಆರಂಭದ ನಿರೀಕ್ಷೆಗಿಂತ ಎರಡು ಪಟ್ಟಾಗಿತ್ತು. ಮೊದಲಿಗೆ ಹರಾಜು ಮನೆ ಕಟಾವಿಕಿ ಶೂಗೆ 8000 ಯೂರೊ ಬೆಲೆ ಕಟ್ಟಿತ್ತು.
 
 ಸಹಿ ಮಾಡಿದ ಶೂ 2015ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೋಲ್ಟ್ 100 ಮೀ ಓಟದಲ್ಲಿ ಬಳಸಿದ್ದರು. ಅದರಲ್ಲಿ ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ ಅವರನ್ನು ಹಿಂದಿಕ್ಕಿದ್ದರು.
 
100 ಮೀ ಓಟದಲ್ಲಿ ಚಿನ್ನವಲ್ಲದೇ 200 ಮೀ ಓಟ ಮತ್ತು 4X100 ಮೀ ರಿಲೆಯಲ್ಲಿ ಕೂಡ ಅವರು ಎರಡು ಚಿನ್ನಗಳನ್ನು ಗೆದ್ದಿದ್ದರು.  ಉಸೇನ್ ಇತ್ತೀಚೆಗೆ ರಿಯೊ ಒಲಿಂಪಿಕ್ಸ್  ಸ್ಟಾರ್ ಆಗಿ ಹೊಮ್ಮಿದ್ದು, ಮೂರು ಟ್ರಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ಸತತವಾಗಿ ಮೂರು ಒಲಿಂಪಿಕ್ಸ್‌ಗಳಲ್ಲಿ ಮೂರು ಚಿನ್ನಗಳನ್ನು ಗೆದ್ದ ಶ್ರೇಯಕ್ಕೆ ಪಾತ್ರರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರೊನಾಲ್ಡೊಗೆ ಯುಇಎಫ್‌ಎ ಶ್ರೇಷ್ಟ ಆಟಗಾರ ಪ್ರಶಸ್ತಿ