Select Your Language

Notifications

webdunia
webdunia
webdunia
webdunia

ರೊನಾಲ್ಡೊಗೆ ಯುಇಎಫ್‌ಎ ಶ್ರೇಷ್ಟ ಆಟಗಾರ ಪ್ರಶಸ್ತಿ

ರೊನಾಲ್ಡೊಗೆ  ಯುಇಎಫ್‌ಎ ಶ್ರೇಷ್ಟ ಆಟಗಾರ ಪ್ರಶಸ್ತಿ
ಮೊನಾಕೊ: , ಶುಕ್ರವಾರ, 26 ಆಗಸ್ಟ್ 2016 (17:01 IST)
ರಿಯಲ್ ಮ್ಯಾಡ್ರಿಟ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಯುರೋಪ್‌ನ ಯುಇಎಫ್‌ಎ ಶ್ರೇಷ್ಟ ಆಟಗಾರ ಪ್ರಶಸ್ತಿಗೆ ಗುರುವಾರ ಪಾತ್ರರಾಗಿದ್ದಾರೆ. ಪೋರ್ಚುಗಲ್‌ ತಂಡದ ಜತೆ ಆಡಿ ಕಳೆದ ಸೀಸನ್‌ನ ಚಾಂಪಿಯನ್ಸ್ ಲೀಗ್ ಮತ್ತು ಯೂರೊ 2016 ಎರಡನ್ನೂ ಗೆದ್ದ ಬಳಿಕ ರೊನಾಲ್ಡೊ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
 
 
31 ವರ್ಷದ ರೊನಾಲ್ಡೊ ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಈ ಮನ್ನಣೆಗೆ ಪಾತ್ರರಾಗಿದ್ದು, ರಿಯಲ್ ತಂಡದ ಸಹಆಟಗಾರ ಗ್ಯಾರೆತ್ ಬೇಲ್ ಮತ್ತು ಆಲ್ಟಿಕೊ ಮ್ಯಾಡ್ರಿಡ್ ಆಂಟೋಯಿನ್ ಗ್ರೇಜ್‌ಮೆನ್ ಅವರಿಗಿಂತ ಮುಂಚಿತವಾಗಿ ಈ ಸಾಧನೆ ಮಾಡಿದರು.
 
ರೊನಾಲ್ಡೊ ಗೆಲುವಿನ ಸ್ಪಾಟ್ ಕಿಕ್ ಬಾರಿಸಿದಾಗ ರಿಯಲ್ 11ನೇ ಐರೋಪ್ಯ ಕಪ್ ಪ್ರಶಸ್ತಿಗೆ ಪಾತ್ರವಾಗಿತ್ತು. ರೊನಾಲ್ಡೊ ಮೂರು ಗೋಲುಗಳನ್ನು ಹೊಡೆದು ಪಂದ್ಯಾವಳಿಯ ಫೈನಲ್ ತಲುಪಿ ಫ್ರಾನ್ಸ್ ಮೈಕೇಲ್ ಪ್ಲಾಟಿನಿ ಐರೋಪ್ಯ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ 9 ಗೋಲುಗಳ ದಾಖಲೆಯನ್ನು ಸಮಗೊಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ನಿವೃತ್ತಿ ಭಾಷಣವನ್ನು ಪಾಕ್‌ನ ಸಮಿ ಅಸ್ಲಾಂ ನೆನಪಿಸಿಕೊಳ್ಳುವುದೇಕೆ?