ಬ್ಯಾಡ್ಮಿಂಟನ್ ಆಟಗಾರ್ತಿ ಎರಡು ಬಾರಿಯ ಹಾಲಿ ಚಾಂಪಿಯನ್ ಪಿ.ವಿ. ಸಿಂಧು ಚೀನಾದ ಮಕಾವ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಐತಿಹಾಸಿಕ ಗೆಲುವನ್ನು ದಾಖಲಿಸುವ ಮೂಲಕ ಮಹಿಳೆಯ ಸಿಂಗಲ್ಸ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ.
ವಿಶ್ವದ 12ನೇ ಶ್ರೇಯಾಂಕಿತೆ ಸಿಂಧು ಜಪಾನಿನ ಫೈನಲ್ಸ್ ಪಂದ್ಯದಲ್ಲಿ ಜಪಾನಿನ ಮಿನಾಟ್ಸು ಮಿಟಾನಿಯನ್ನು ಸೋಲಿಸಿ 120,000 ಅಮೆರಿಕ ಡಾಲರ್ ಮುಕ್ತ ಗ್ರಾಂಡ್ ಪ್ರಿಕ್ಸಿ ಗೋಲ್ಡ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಸಿಂಧು ಆಟದಲ್ಲಿ ಮೇಲುಗೈ ಸಾಧಿಸಿ 21-9, 21-23, 21-14ರಿಂದ 6ನೇ ಸೀಡ್ ಮಿಟಾನಿಯನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಸೋಲಿಸಿದರು.
ವಿಶ್ವದ 12ನೇ ಶ್ರೇಯಾಂಕದ ಆಟಗಾರ್ತಿ ಸಿಧು ಕೆಲವು ಅದ್ಭುತ ಹೊಡೆತಗಳು ಮತ್ತು ರಿಟರ್ನ್‌ಗಳನ್ನು ಮಾಡುವ ಮೂಲಕ ಗೆಲವು ಗಳಿಸಿದರು. ಸಿಂಧು ಆರಂಭದಿಂದಲೇ ಮೇಲುಗೈ ಸಾಧಿಸಿ ಮಿಟಾನಿಯ ತಪ್ಪುಗಳ ಲಾಭ ಪಡೆದು 11-5ರಿಂದ ಮುನ್ನಡೆ ಸಾಧಿಸಿದರು.