Publish Date: Fri, 30 Dec 2016 (07:24 IST)
Updated Date: Fri, 30 Dec 2016 (07:27 IST)
ನವದೆಹಲಿ: ಈಗಾಗಲೇ ಭಾರತೀಯ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ವಿಶ್ವ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದೀಗ ಕುಸ್ತಿಪಟು ಸುಶೀಲ್ ಕುಮಾರ್ ಸರದಿ. ಅವರಿನ್ನು ಡಬ್ಲ್ಯುಡಬ್ಲ್ಯುಇ ನಲ್ಲಿ ಡಿಶುಂ ಡಿಶುಂ ಮಾಡಲಿದ್ದಾರಂತೆ.
2017 ರ ನವಂಬರ್ ತಿಂಗಳಿನಲ್ಲಿ ಅಧಿಕೃತವಾಗಿ ಅವರು ವಿಶ್ವ ಕುಸ್ತಿ ಎಂಟರ್ ಟೈನ್ ಮೆಂಟ್ ಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಐಪಿಎಲ್ ಮಾದರಿಯಲ್ಲಿ ನಡೆಯುವ ಕುಸ್ತಿ ಕೂಟದಲ್ಲಿ ಭಾಗವಹಿಸಲು ಈ ವರ್ಷಾರಂಭದಲ್ಲೇ ಸುಶೀಲ್ ಗೆ ಕರೆ ಬಂದಿತ್ತಂತೆ.
ಆದರೆ ಅವರು ಒಪ್ಪಿರಲಿಲ್ಲ. ಕುಸ್ತಿ ಕೂಟದ ಪ್ರತಿನಿಧಿಗಳು ಪದೇ ಪದೇ ಕೇಳಿಕೊಂಡಿದ್ದರಿಂದ ಸುಶೀಲ್ ಒತ್ತಾಯಕ್ಕೆ ಮಣಿದು ಭಾಗವಹಿಸಲು ಒಪ್ಪಿದ್ದಾರೆ. ಇದರ ಸಂಬಂಧ ಹಣಕಾಸಿನ ವಿಷಯವಾಗಿ ಎಲ್ಲಾ ಸೆಟ್ಲ್ ಮೆಂಟ್ ಮಾತುಕತೆಗಳು ಮಗಿದಿದೆ ಎಂದು ಸುಶೀಲ್ ಆಪ್ತರು ಹೇಳಿಕೊಂಡಿದ್ದಾರೆ. 33 ವರ್ಷದ ಸುಶೀಲ್ ಕುಮಾರ್ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಭಾರತೀಯ ಕುಸ್ತಿ ಪಟುಗಳ ಪೈಕಿ ಅವರು ಖ್ಯಾತ ನಾಮರು. ಹೀಗಾಗಿ ಡಬ್ಲ್ಯುಡಬ್ಲ್ಯುಇ ಪ್ರತಿನಿಧಿಗಳು ಅವರಿಗೆ ಗಾಳ ಹಾಕಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ