ಹೈದರಾಬಾದ್: ಇತ್ತೀಚೆಗೆ ದೇಶದ ಮುಸ್ಲಿಂ ಕ್ರೀಡಾ ಪಟುಗಳು ಒಂದಲ್ಲಾ ಒಂದು ಕಾರಣಕ್ಕೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇದೀಗ ಆ ಸರದಿ ಟೆನಿಸ್ ಬೆಡಗಿ ಸಾನಿಯಾ ಮಿರ್ಜಾರದ್ದು.
ಮೈ ತೋರಿಸುವ ಬಟ್ಟೆ ಹಾಕಿ ಫೇಸ್ ಬುಕ್ ನಲ್ಲಿ ಫೋಟೋ ಅಪ್ ಲೋಡ್ ಮಾಡಿದ್ದಕ್ಕೆ ಸಂಪ್ರದಾಯವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಜೀವನ ತಾತ್ಕಾಲಿಕವಾಗಿದ್ದು, ಇಹಲೋಕ ತ್ಯಜಿಸಿದ ಮೇಲೆ ಇರುವ ಜೀವನ ಶಾಶ್ವತವಾದದ್ದು ಎನ್ನುವುದನ್ನು ನಾವು ಮರೆಯಬಾರದು” ಎಂದು ಒಬ್ಬರು ಸಾನಿಯಾ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಕ್ರಿಕೆಟಿಗ ಮೊಹಮ್ಮದ್ ಶಮಿ ತಮ್ಮ ಪತ್ನಿಯ ಸ್ಟೈಲಿಶ್ ಉಡುಪು ಧರಿಸಿದ ಫೋಟೋ ಪ್ರಕಟಿಸಿ ವಿವಾದಕ್ಕೆ ಕಾರಣವಾಗಿದ್ದರು. ಮೊಹಮ್ಮದ್ ಕೈಫ್ ಸೂರ್ಯ ನಮಸ್ಕಾರ ಮಾಡಿದ್ದಕ್ಕೆ ಸಂಪ್ರದಾಯವಾದಿಗಳು ಕಿಡಿ ಕಾರಿದ್ದರು. ಇದೀಗ ಟೆನಿಸ್ ಬೆಡಗಿಯ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ