Select Your Language

Notifications

webdunia
webdunia
webdunia
webdunia

ತೆರಿಗೆ ವಂಚನೆ ಪ್ರಕರಣದಲ್ಲಿ ಸಾನಿಯಾ ಮಿರ್ಜಾ ಫಿಕ್ಸ್!

ತೆರಿಗೆ ವಂಚನೆ ಪ್ರಕರಣದಲ್ಲಿ ಸಾನಿಯಾ ಮಿರ್ಜಾ ಫಿಕ್ಸ್!
NewDelhi , ಗುರುವಾರ, 9 ಫೆಬ್ರವರಿ 2017 (09:24 IST)
ನವದೆಹಲಿ: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಸುಮಾರು 20 ಲಕ್ಷ  ರೂ ತೆರಿಗೆ ವಂಚನೆ ಮಾಡಿದ್ದಾರೆಂದು ಆದಾಯ ತೆರಿಗೆ ಇಲಾಖೆಯ ಸೇವಾ ತೆರಿಗೆ ವಿಭಾಗ ನೋಟೀಸು ಜಾರಿ ಮಾಡಿದೆ.

 
“ಸೇವಾ ತೆರಿಗೆ ಪಾವತಿ ಮಾಡದೇ ಇರುವುದರ ಬಗ್ಗೆ ನೀವು ಖುದ್ದಾಗಿ ಸಂಬಂಧಪಟ್ಟ ಅಧಿಕಾರಿಗಳೆದುರು ಹಾಜರಾಗಿ ವಿಚಾರಣೆಗೊಳಪಡಬೇಕು. ಇದಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಹಾಜರುಪಡಿಸಬೇಕು” ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ.

ಫೆಬ್ರವರಿ 6 ರಂದು ನೋಟೀಸು ಜಾರಿ ಮಾಡಲಾಗಿದ್ದು, ಸಾನಿಯಾ ಇದೇ ತಿಂಗಳ 16 ರೊಳಗೆ ವಿಚಾರಣೆಗೆ ಹಾಜರಾಗಬೇಕಿದೆ. ಒಂದು ವೇಳೆ ವಿಚಾರಣೆಗೆ ಹಾಜರಾಗಲು ತಪ್ಪಿದರೆ, ಅಥವಾ ಇನ್ನೇನಾದರೂ ಸಬೂಬು ಹೇಳಿ ತಪ್ಪಿಸಿಕೊಂಡರೆ ತಕ್ಕ ಶಿಕ್ಷೆ ಎದುರಿಸಬೇಕಾಗಬಹುದು ಎಂದು ಇಲಾಖೆ ನೋಟೀಸಿನಲ್ಲಿ ಎಚ್ಚರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಶತಕ ಬಾರಿಸಿದರೂ ಕನ್ನಡಿಗ ಕರುಣ್ ನಾಯರ್ ಮೇಲೆ ಕರುಣೆ ತೋರಲಿಲ್ಲ ನಾಯಕ ವಿರಾಟ್ ಕೊಹ್ಲಿ!