Select Your Language

Notifications

webdunia
webdunia
webdunia
webdunia

2016ನೇ ಸೀಸನ್‌ನ 5 ನೇ ಪ್ರಶಸ್ತಿಗೆ ಸಮೀಪದಲ್ಲಿ ಸಾನಿಯಾ, ಮಾರ್ಟಿನಾ

2016ನೇ ಸೀಸನ್‌ನ  5 ನೇ ಪ್ರಶಸ್ತಿಗೆ ಸಮೀಪದಲ್ಲಿ ಸಾನಿಯಾ, ಮಾರ್ಟಿನಾ
ಮ್ಯಾಡ್ರಿಡ್: , ಶನಿವಾರ, 7 ಮೇ 2016 (12:01 IST)
ಟಾಪ್ ಸೀಡ್‌ಗಳಾದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಸೆಮಿಫೈನಲ್ ಪಂದ್ಯದಲ್ಲಿ ವಾನಿಯಾ ಕಿಂಗ್ ಮತ್ತು ಅಲ್ಲಾ ಕುದ್ರ್ಯಾವತ್ಸೆವಾ ಅವರನ್ನು 6-2, 6-0 ಯಿಂದ ಸೋಲಿಸಿ ಮ್ಯಾಡ್ರಿಡ್ ಓಪನ್ ಡಬಲ್ಸ್ ಫೈನಲ್ ತಲುಪಿದ್ದಾರೆ. ಭಾರತ-ಸ್ವಿಸ್ ಜೋಡಿಗೆ ಸ್ಟುಟ್‌ಗಾರ್ಟ್‌ನಲ್ಲಿ ರನ್ನರ್ಸ್‌ಅಪ್‌ನಲ್ಲಿ ಅಂತ್ಯಗೊಂಡ ಬಳಿಕ ಎರಡನೇ ಸತತ ಫೈನಲ್ ಪಂದ್ಯವಾಗಿದೆ.
 
ಸಾನಿಯಾ ಮತ್ತು ಮಾರ್ಟಿನಾ ಅವರು ಅಮೆರಿಕ-ರಷ್ಯಾ ಜೋಡಿಗೆ ಇಂಡಿಯನ್ ವೆಲ್ಸ್ ಎರಡನೇ ಸುತ್ತಿನಲ್ಲಿ ಸೋತಿದ್ದರು. ಆದರೆ ಈ ಪಂದ್ಯದಲ್ಲಿ ಗೆಲ್ಲುವುದಕ್ಕೆ ಅವಕಾಶ ನೀಡದೇ 50 ನಿಮಿಷಗಳಲ್ಲಿ ಜಯಗಳಿಸಿದ್ದರು. 
 
ಓಪನಿಂಗ್ ಸೆಟ್‌ನಲ್ಲಿ ಒಂದು ಬಾರಿಯೂ ಅವರ ಎದುರಾಳಿಗಳಿಗೆ ಸರ್ವ್ ಉಳಿಸಿಕೊಳ್ಳಲು ಟಾಪ್ ಸೀಡ್ಸ್ ಅವಕಾಶ ನೀಡಲಿಲ್ಲ.  ಎರಡನೇ ಸೆಟ್‌ನಲ್ಲಿ ಸಾನಿಯಾ ಮತ್ತು ಮಾರ್ಟಿನಾ ವಾನಿಯಾ ಮತ್ತು ಅಲ್ಲಾ ಅವರನ್ನು ಎರಡನೇ ಮತ್ತು ನಾಲ್ಕನೇ ಗೇಮ್‌ಗಳಲ್ಲಿ ಸೋಲಿಸಿ 4-0 ಮುನ್ನಡೆ ಗಳಿಸಿದರು.  ಸಾನಿಯಾ ಮತ್ತು ಮಾರ್ಟಿನಾ ಈಗ ಪ್ರಶಸ್ತಿಗಾಗಿ ಐದನೇ ಸೀಡ್ ಕಾರೋಲಿನಾ ಗಾರ್ಸಿಯಾ ಮತ್ತು ಕ್ರಿಸ್ಟಿನಾ ಮ್ಲೆಡೋನೋವಿಕ್ ಅವರನ್ನು ಎದುರಿಸಲಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಹಾನೆ ಮನೋಜ್ಞ ಅರ್ಧಶತಕ: ಡೆಲ್ಲಿ ವಿರುದ್ಧ ಪುಣೆಗೆ ಗೆಲುವು