Select Your Language

Notifications

webdunia
webdunia
webdunia
webdunia

ರಹಾನೆ ಮನೋಜ್ಞ ಅರ್ಧಶತಕ: ಡೆಲ್ಲಿ ವಿರುದ್ಧ ಪುಣೆಗೆ ಗೆಲುವು

ರಹಾನೆ ಮನೋಜ್ಞ ಅರ್ಧಶತಕ: ಡೆಲ್ಲಿ ವಿರುದ್ಧ ಪುಣೆಗೆ ಗೆಲುವು
ಡೆಲ್ಲಿ: , ಶುಕ್ರವಾರ, 6 ಮೇ 2016 (12:01 IST)
ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ  ಡೆಲ್ಲಿ ತಂಡದ 7 ವಿಕೆಟ್‌ಗೆ 162 ರನ್‌ಗೆ ಉತ್ತರವಾಗಿ ಪುಣೆ ಪರ ಅಜಿಂಕ್ಯಾ ರಹಾನೆ ಅವರ ಬಿರುಸಿನ 48 ಎಸೆತಗಳ 63 ರನ್ ನೆರವಿನಿಂದ ಜಯಗಳಿಸಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಕರುಣ್ ನಾಯರ್ 32, ಡುಮಿನಿ 34 ರನ್ ಗಳಿಸಿದರು. ಪುಣೆ ಸೂಪರ್ ಜೈಂಟ್ಸ್ ಪರ ರಹಾನೆ ಅವರು ಮನೋಜ್ಞ ಬ್ಯಾಟಿಂಗ್‌ ಪ್ರದರ್ಶನ ನೀಡಿ ಅಜೇಯರಾಗಿ ಉಳಿದರು. ಉಳಿದಂತೆ ತಿವಾರಿ 21, ಧೋನಿ 27 ರನ್‌‍ಗಳ ನೆರವಿನಿಂದ ಡೆಲ್ಲಿ ಸ್ಕೋರನ್ನು ಸುಲಭವಾಗಿ ಗುರಿಮುಟ್ಟಿದರು.

ಸತತ ಜಯಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಡೆಲ್ಲಿ ತಂಡವು ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಸತತ ಸೋಲುಗಳನ್ನು ಕಂಡ ಪುಣೆ ಸೂಪರ್‌ಜೈಂಟ್ಸ್ ತಂಡಕ್ಕೆ ಈ ಗೆಲುವಿನಿಂದ ಚೈತನ್ಯ ಗರಿಗೆದರಿದೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2016: ಆರ್‌ಸಿಬಿ ನಾಯಕ ಕೊಹ್ಲಿಗೆ ಒಂದು ಪಂದ್ಯದ ನಿಷೇಧದ ಭೀತಿ