Select Your Language

Notifications

webdunia
webdunia
webdunia
webdunia

ಐಪಿಎಲ್ 2016: ಆರ್‌ಸಿಬಿ ನಾಯಕ ಕೊಹ್ಲಿಗೆ ಒಂದು ಪಂದ್ಯದ ನಿಷೇಧದ ಭೀತಿ

ಐಪಿಎಲ್ 2016: ಆರ್‌ಸಿಬಿ ನಾಯಕ ಕೊಹ್ಲಿಗೆ ಒಂದು ಪಂದ್ಯದ ನಿಷೇಧದ ಭೀತಿ
ನವದೆಹಲಿ: , ಗುರುವಾರ, 5 ಮೇ 2016 (18:24 IST)
ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಅವರ ತಂಡ ಮುಂದಿನ ಐಪಿಎಲ್ ಪಂದ್ಯದಲ್ಲಿ ಅಗತ್ಯ ಓವರ್ ರೇಟ್ ಕಾಯ್ದುಕೊಳ್ಳಲು ವಿಫಲರಾದರೆ ವಿರಾಟ್ ಕೊಹ್ಲಿ ಒಂದು ಪಂದ್ಯಕ್ಕೆ ನಿಷೇಧದ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ. ಏಳು ಪಂದ್ಯಗಳಿಂದ ಕೇವಲ 2 ಜಯಗಳಿಸಿರುವ ಬೆಂಗಳೂರು ತಂಡವು ಗೆಲುವಿನ ಗತಿಗೆ ಹಿಂತಿರುಗಲು ತಿಣುಕಾಡುತ್ತಿದೆಯಲ್ಲದೇ, ನಿಗದಿತ ಅವಧಿಯಲ್ಲಿ ಓವರುಗಳನ್ನು ಮುಗಿಸಲು ಕೂಡ ಹೆಣಗಾಡುತ್ತಿದೆ. 
 
ಈ ತಪ್ಪುಗಳ ಪರಿಣಾಮವು ನಾಯಕನ ಮೇಲೆ ನೇರವಾಗಿ ಬೀಳಲಿದ್ದು, ವಿರಾಟ್ ಕೊಹ್ಲಿಗೆ ಈಗಾಗಲೇ ನಿಧಾನ ಗತಿಯ ಓವರುಗಳಿಗಾಗಿ ಎರಡು ಬಾರಿ ದಂಡದ ಶಿಕ್ಷೆ ವಿಧಿಸಲಾಗಿದೆ. 
 ದೆಹಲಿ ಬಲಗೈ ಆಟಗಾರನಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 12 ಲಕ್ಷ ಮತ್ತು 24 ಲಕ್ಷ ದಂಡವನ್ನು ವಿಧಿಸಲಾಗಿದೆ.  

ಇನ್ನೊಂದು ನಿಧಾನಗತಿಯ ಬೌಲಿಂಗ್ ಮಾಡಿದರೆ ಅವರಿಗೆ 30 ಲಕ್ಷ ರೂ. ದಂಡವಲ್ಲದೇ ಒಂದು ಪಂದ್ಯದಿಂದ ನಿಷೇಧದ ಶಿಕ್ಷೆಯೂ ಎದುರಾಗಲಿದೆ. ಐಪಿಎಲ್ ನೀತಿ ಸಂಹಿತೆ ಪ್ರಕಾರ, ಮೂರನೇ ಮತ್ತು ತರುವಾಯದ ತಪ್ಪಿಗಾಗಿ ಬೌಲಿಂಗ್ ತಂಡದ ನಾಯಕನಿಗೆ 50,000 ಡಾಲರ್ ದಂಡ ಮತ್ತು ಮುಂದಿನ ಲೀಗ್ ಪಂದ್ಯದಲ್ಲಿ ನಿಷೇಧದ ಶಿಕ್ಷೆ ವಿಧಿಸಲಾಗುತ್ತದೆ. ಕೊಹ್ಲಿ ಏಳು ಇನ್ನಿಂಗ್ಸ್‌ಗಳಿಂದ 433 ರನ್ ಸ್ಕೋರ್ ಮಾಡಿ ಪ್ರಮುಖ ರನ್ ಸ್ಕೋರರ್ ಎನಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಲ್ ಪಾವತಿ ಮಾಡಿದರೆ ಡೇಟ್ ನೀಡುವೆ: ಕ್ರಿಸ್ ಗೇಲ್ ನಗೆಯುಕ್ಕುವ ಪ್ರತಿಕ್ರಿಯೆ