Publish Date: Wed, 26 Oct 2016 (09:00 IST)
Updated Date: Wed, 26 Oct 2016 (09:04 IST)
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಅಂತಾರಾಷ್ಟ್ರೀಯ ಸಮಿತಿಯ ಆಟಗಾರರ ಆಯೋಗದ ಸಭೆಗೆ ಹಾಜರಾಗುವುದಿಲ್ಲ. ಚೀನಾ ಮತ್ತು ಹಾಂಗ್ ಕಾಂಗ್ ಗಳಲ್ಲಿ ಸೂಪರ್ ಸೀರೀಸ್ ಆಡಲು ತಯಾರಿ ನಡೆಸಲಿರುವುದರಿಂದ ಮುಂದಿನ ತಿಂಗಳು ನಡೆಯಲಿರುವ ಈ ಸಭೆಗೆ ಅವರು ಹಾಜರಾಗುವುದಿಲ್ಲ.
ಕಳೆದ ತಿಂಗಳು ಸೈನಾ ಈ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಸಭೆಗೆ ಹಾಜರಾಗಲು ಅಸಾಧ್ಯವಾಗಿರುವ ವಿಷಯವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ತಿಳಿಸುವಂತೆ ಸೈನಾ ಭಾರತೀಯ ಒಲಿಂಪಿಕ್ಸ್ ಸಮಿತಿಗೆ ಪತ್ರ ಬರೆದಿದ್ದಾರೆ.
“ಮುಂದಿನ ತಿಂಗಳು 6 ರಿಂದ 11 ರವರೆಗೆ ನಡೆಯಲಿರುವ ಮೊದಲ ಸಭೆಗೆ ಹಾಜರಾಗುವಂತೆ ನನಗೆ ಆಹ್ವಾನ ಬಂದಿತ್ತು. ಆದರೆ ಸೂಪರ್ ಸೀರೀಸ್ ಗಳಿಗೆ ತಯಾರಾಗಬೇಕಿರುವುದರಿಂದ ನನಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ” ಎಂದು ಸೈನಾ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೊಳಗಾದ ಸೈನಾ ಈಗಷ್ಟೇ ಕಣಕ್ಕಿಳಿದಿದ್ದಾರೆ. ಹೀಗಾಗಿ ಅವರಿಗೆ ಮುಂಬರುವ ಸೂಪರ್ ಸೀರೀಸ್ ಮಹತ್ವದ್ದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ