ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದರಿಂದ ಪಂದ್ಯಾವಳಿಯಲ್ಲಿ ಭಾರತದ ಸವಾಲ್ ಅಂತ್ಯಗೊಂಡಂತಾಗಿದೆ.
ಎಂಟನೇ ಶ್ರೇಯಾಂಕಿತ ಸೈನಾ, ತಮ್ಮ ಸ್ಪೇನ್ ಎದುರಾಳಿ ಕರೋಲಿನಾ ಮರಿನ್ ವಿರುದ್ಧ ಕೇವಲ 67 ನಿಮಿಷಗಳ ಪಂದ್ಯದಲ್ಲಿ 22-24 11-21 ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು
ಪಂದ್ಯಾವಳಿಯಲ್ಲಿ ಸೈನಾಗೆ ಸರಿಯಾದ ಪೈಪೋಟಿ ನೀಡುವಂತಹ ಕ್ರೀಡಾಪಟುಗಳು ಇಲ್ಲವಾಗಿದ್ದರಿಂದ ಉತ್ತಮ ಪ್ರದರ್ಶನ ನೀಡುತ್ತಾ ಕ್ವಾರ್ಟರ್‌ಫೈನಲ್ ತಲುಪಿದ್ದರು. ಆದರೆ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋತು ನಿರ್ಗಮಿಸಿದರು.
ಸೈನಾ ನೆಹ್ವಾಲ್, 2009, 2010 ಮತ್ತು 2012 ರಲ್ಲಿ ಇಂಡೋನೇಷ್ಯಾ ಓಪನ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಸೈನಾ , ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ಫಿಟ್‌ರಿಯಾನಿ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದರು.
ವಿಶ್ವ ಚಾಂಪಿಯನ್ ಮರಿನ್, ಸೆಮಿಫೈನಲ್ ಪಂದ್ಯದಲ್ಲಿ ಚೀನಾ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ವಾಂಗ್ ಯಿಹಾನ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.