Select Your Language

Notifications

webdunia
webdunia
webdunia
webdunia

ರಿಯೊ ಒಲಿಂಪಿಕ್ಸ್ ಕುಸ್ತಿಪಟುಗಳಿಗೆ ಸ್ಫೂರ್ತಿ ತುಂಬಿದ ಸಚಿನ್ ತೆಂಡೂಲ್ಕರ್

ರಿಯೊ ಒಲಿಂಪಿಕ್ಸ್ ಕುಸ್ತಿಪಟುಗಳಿಗೆ ಸ್ಫೂರ್ತಿ ತುಂಬಿದ ಸಚಿನ್ ತೆಂಡೂಲ್ಕರ್
ನವದೆಹಲಿ , ಮಂಗಳವಾರ, 24 ಮೇ 2016 (16:39 IST)
ನವದೆಹಲಿ: ಭಾರತದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅವರು ರಿಯೊ ಒಲಿಂಪಿಕ್ಸ್‌‌ಗೆ ತೆರಳಲಿರುವ ಕುಸ್ತಿ ಪಟುಗಳನ್ನು ನಗರದ ಹೊಟೆಲ್‌ನಲ್ಲಿ ಭೇಟಿ ಮಾಡಿ ಅವರಲ್ಲಿ  ಆತ್ಮವಿಶ್ವಾಸ ತುಂಬಿದರು. ಯೋಗೇಶ್ವರ್ ದತ್ (ಪುರುಷರ 65 ಕೆಜಿ) ಮತ್ತು ತೋಮಾಲ್( 57 ಕೆಜಿ) ಹೊರತುಪಡಿಸಿ ಒಲಿಂಪಿಕ್ ಕೋಟಾ ಗಳಿಸಿದ ಎಲ್ಲಾ ಕುಸ್ತಿಪಟುಗಳಾದ ನರಸಿಂಗ ಯಾದವ್, ವಿನೇಶ್ ಪೋಗಟ್, ಬಬಿತಾ ಕುಮಾರಿ, ಸಾಕ್ಷಿ ಮಲಿಕ್, ರವೀಂದರ್ ಖಾತ್ರಿ, ಹರದೀಪ್ ಲೆಜೆಂಡ್ ಬ್ಯಾಟ್ಸ್‌ಮನ್‌ ಸಚಿನ್ ಅವರನ್ನು  ಭೇಟಿ ಮಾಡಿದರು. 
 
ಎಲ್ಲಾ ಮೂರು ಮಾದರಿ ಕುಸ್ತಿಗಳ ಕೋಚ್‌ಗಳು ಈ ಸಂದರ್ಭದಲ್ಲಿ ಐಒಎ ಕಾರ್ಯದರ್ಶಿ ಜನರಲ್ ರಾಜೀವ್ ಮೆಹ್ತಾ ಮತ್ತು ಒಲಿಂಪಿಕ್‌ಗೆ ಆಡಲಿರುವ ಟೇಬಲ್ ಟೆನ್ನಿಸ್ ಆಟಗಾರ ಮನಿಕಾ ಬಾತ್ರಾ ಜತೆ ಹಾಜರಿದ್ದರು. 
 
 ಮಹಿಳೆಯರ ಕುಸ್ತಿ ತಂಡದ ಕೋಚ್ ಕುಲದೀಪ್ ಸಿಂಗ್ ತೆಂಡೂಲ್ಕರ್ ಜತೆ 2 ಗಂಟೆಗಳ ಭೇಟಿಯು ಕುಸ್ತಿಪಟುಗಳಿಗೆ ಮಾನಸಿಕ ಸ್ಫೂರ್ತಿ ತುಂಬಿಸಿತು ಎಂದಿದ್ದಾರೆ. ತೆಂಡೂಲ್ಕರ್ ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ತಮ್ಮ ಆಟದ ದಿನಗಳಲ್ಲಿ ಎಲ್ಲಾ ಒತ್ತಡಗಳನ್ನು ಹೇಗೆ ನಿಭಾಯಿಸಿದೆ ಎಂದು ತಿಳಿಸಿದರು. 
 
ರಿಯೊ ಒಲಿಂಪಿಕ್ಸ್‌ಗೆ ಐಒಎ ಸದ್ಭಾವನೆ ರಾಯಭಾರಿಯಾಗಿರುವ ಸಚಿನ್ ರಿಯೊ ಗೇಮ್ಸ್‌ನಲ್ಲಿ ಕೆಲವು ಸವಾಲುಗಳನ್ನು ಎದುರಿಸುವ ಬಗ್ಗೆ ಮೌಲ್ಯಯುತ ಟಿಪ್ಸ್‌ಗಳನ್ನು ನೀಡಿದರು. ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಂಡ ಎದುರಾಳಿಗಳ ದೌರ್ಬಲ್ಯಗಳನ್ನು ಗುರುತಿಸಿ ಅದನ್ನು ಗಮನಕ್ಕೆ ತರಬೇಕೆಂದು ಅವರು ಕರೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್: ತಲೆಗೆ ಪೆಟ್ಟು ಬಿದ್ದ ಅರ್ಜೆಂಟಿನಾ ಫುಟ್ಬಾಲ್ ಆಟಗಾರ ಮೈದಾನದಲ್ಲೇ ಸಾವು