Select Your Language

Notifications

webdunia
webdunia
webdunia
webdunia

ಫ್ರೆಂಚ್ ಓಪನ್ ಟೆನ್ನಿಸ್ ಮಿಶ್ರ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡ ರೋಹನ್ ಬೋಪಣ್ಣ

ಫ್ರೆಂಚ್ ಓಪನ್ ಟೆನ್ನಿಸ್ ಮಿಶ್ರ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡ ರೋಹನ್ ಬೋಪಣ್ಣ
ಪ್ಯಾರಿಸ್ , ಗುರುವಾರ, 8 ಜೂನ್ 2017 (20:50 IST)
ಕನ್ನಡಿಗ ರೋಹನ್ ಬೋಪಣ್ಣ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕೆನಡಾದ ಗೇಬ್ರಿಯಾಲಾ ಡಬ್ರೋಡ್ಸಕಿ ಜೊತೆ ಬೋಪಣ್ಣ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯ ಮಿಶ್ರ ಡಬಲ್ಸ್ ಗೆದ್ದಿದ್ದಾರೆ. ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ 4ನೇ ಭಾರತೀಯ ಎಂಬ ಖ್ಯಾತಿಗೆ ಬೋಪಣ್ಣ ಪಾತ್ರರಾಗಿದ್ದಾರೆ.

2ನೇ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್`ನಲ್ಲಿ ಸೆಣೆಸಿದ ಬೋಪಣ್ಣ ಮತ್ತು ಡಬ್ರೌಸ್ಕಿ ಜೋಡಿ ಜರ್ಮನಿಯ ಅನ್ನಾ ಲೇನಾ ಮತ್ತು ಕೊಲಂಬಿಯಾದ ರಾಬರ್ಟ್ ಫರಾ ಜೋಡಿ ವಿರುದ್ಧ 2-6, 6-2, 12-10 ಸೆಟ್`ಗಳಿಂದ ಗೆಲುವು ದಾಖಲಿಸಿತು.

ರೋಹನ್ ಬೋಪಣ್ಣಗೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವಿಟ್ಟರ್`ನಲ್ಲಿ ಅಭಿನಂದನೆ ತಿಳಿಸಿದ್ದಾರೆ. ವೆಲ್ ಡನ್ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಎಂದು ಹೊಗಳಿ ಹರ್ಷ ವ್ಯಕ್ತಪಡಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ವಿರುದ್ಧ ಅಮೋಘ ಶತಕ ಸಿಡಿಸಿದ ಶಿಖರ್ ಧವನ್’