Select Your Language

Notifications

webdunia
webdunia
webdunia
webdunia

ಶ್ರೀಲಂಕಾ ವಿರುದ್ಧ ಅಮೋಘ ಶತಕ ಸಿಡಿಸಿದ ಶಿಖರ್ ಧವನ್’

ಶ್ರೀಲಂಕಾ ವಿರುದ್ಧ ಅಮೋಘ ಶತಕ ಸಿಡಿಸಿದ ಶಿಖರ್ ಧವನ್’
ಓವಲ್ , ಗುರುವಾರ, 8 ಜೂನ್ 2017 (18:31 IST)
ಓವಲ್`ನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅಮೋಘ ಶತಕ ಸಿಡಿಸಿದ್ದಾರೆ. 15 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 125 ರನ್ ಸಿಡಿಸಿದ ಶಿಖರ್ ಧವನ್ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ.

ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಧವನ್ ಶ್ರೀಲಂಕಾ ಬೌಲರ್`ಗಳ ಬೆವರಿಳಿಸಿದರು. ಯಾವುದೇ ಹಂತದಲ್ಲೂ ಶ್ರೀಲಂಕಾ ಬೌಲರ್`ಗಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡದೇ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದ್ದರು. ಧವನ್`ಗೆ ಉತ್ತಮ ಸಾಥ್ ನೀಡಿದ ರೋಹಿತ್ ಶರ್ಮಾ 78 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಕೊಹ್ಲಿ ಶೂನ್ಯು ಸುತ್ತಿ ನಿರ್ಗಮಿಸಿದರು. ಯುವಿ ಸಹ ಸಹ ಕ್ರೀಸ್`ನಲ್ಲಿ ನಿಲ್ಲಲಿಲ್ಲ. ಧೋನಿ ಜೊತೆ ಸೇರಿಕೊಂಡ ಧವನ್ ತಂಡದ ಮೊತ್ತವನ್ನ 250ರ ಗಡಿ ದಾಟಿಸಿದರು.

ಏಕದಿನ ಕ್ರಿಕೆಟ್`ನಲ್ಲಿ ಧವನ್ ಸಿಡಿಸಿದ 10ನೇ ಶತಕ ಇದಾಗಿದೆ. ಇತ್ತೀಚೆಗೆ ಮುಗಿದ ಐಪಿಎಲ್`ನಲ್ಲೂ ಅತ್ಯುತ್ತಮ ಫಾರ್ಮ್`ನಲ್ಲಿದ್ದ ಶಿಖರ್ ಧವನ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಪಂದ್ಯ ಆರಂಭಕ್ಕೂ ಕೆಲ ಗಂಟೆಗಳ ಮುನ್ನ ಜಡೇಜಾಗೆ ಗುಡ್ ನ್ಯೂಸ್