Select Your Language

Notifications

webdunia
webdunia
webdunia
webdunia

ರಿಯೋ ಒಲಿಂಪಿಕ್ಸ್ ಶೂಟಿಂಗ್: ಅಭಿನವ್ ಭಿಂದ್ರಾ ಫೈನಲ್‌ಗೆ, ಗಗನ್ ನಾರಂಗ್ ಔಟ್

rio olympics
ರಿಯೊ ಡಿ ಜನೈರೊ , ಸೋಮವಾರ, 8 ಆಗಸ್ಟ್ 2016 (19:20 IST)
ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಭಿಂದ್ರಾ ಸೋಮವಾರ ರಿಯೊ ಒಲಿಂಪಿಕ್ಸ್‌ನಲ್ಲಿ ತಮ್ಮ ಶೂಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿ 10 ಮೀಟರ್ ಏರ್ ರೈಫಲ್  ಫೈನಲ್ಸ್ ಪ್ರವೇಶಿಸಿದ್ದಾರೆ. ಭಿಂದ್ರಾ ಅವರು 625. 7 ಪಾಯಿಂಟ್‌ಗಳೊಂದಿಗೆ ಏಳನೇ ಸ್ಥಾನವನ್ನು ಗಳಿಸುವ ಮೂಲಕ ಫೈನಲ್ ಪ್ರವೇಶಿಸಿದರು.

ಆದರೆ ಸಹ ಆಟಗಾರ ಭಾರತದ ಗಗನ ನಾರಂಗ್ ಅರ್ಹತಾ ಸುತ್ತಿನಲ್ಲಿ 23ನೇ ಸ್ಥಾನ ಗಳಿಸಿದ್ದರಿಂದ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. 2012ರ ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತ ನಾರಂಗ್ 621.7 ಪಾಯಿಂಟ್ ಸ್ಕೋರ್‌‍ನೊಂದಿಗೆ 23ನೇ ಸ್ಥಾನದಲ್ಲಿ ಮುಕ್ತಾಯ ಕಂಡಿದ್ದಾರೆ.

ಭಾರತದ ಜೀತು ರಾಯ್ ಮತ್ತು ಹೀನಾ ಸಿದು ಯಾವುದೇ ಪದಕವಿಲ್ಲದೇ ಪಂದ್ಯದಿಂದ ಹೊರಬಿದ್ದಿದ್ದರಿಂದ ಭಾರತದ ಶೂಟಿಂಗ್ ಅಭಿಯಾನವು ನಿರಾಶದಾಯಕವಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

16 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿದು ಚಿನ್ನ ಗೆದ್ದ ಚೀನಾ ವೇಟ್‌ಲಿಫ್ಟರ್