Select Your Language

Notifications

webdunia
webdunia
webdunia
webdunia

ರಿಯೊ ಒಲಿಂಪಿಕ್ಸ್ ಹಾಕಿ: ಅರ್ಜಂಟೈನಾ ವಿರುದ್ಧ ಜರ್ಮನಿ, ಬೆಲ್ಜಿಯಂ ವಿರುದ್ಧ ನೆದರ್‌ಲೆಂಡ್ಸ್ ಸೆಮಿಫೈನಲ್ಸ್

ರಿಯೊ ಒಲಿಂಪಿಕ್ಸ್ ಹಾಕಿ: ಅರ್ಜಂಟೈನಾ ವಿರುದ್ಧ ಜರ್ಮನಿ, ಬೆಲ್ಜಿಯಂ ವಿರುದ್ಧ ನೆದರ್‌ಲೆಂಡ್ಸ್ ಸೆಮಿಫೈನಲ್ಸ್
ರಿಯೊ ಡಿ ಜನೈರೊ , ಮಂಗಳವಾರ, 16 ಆಗಸ್ಟ್ 2016 (12:29 IST)
ಭಾರತ ರಿಯೊ ಒಲಿಂಪಿಕ್ಸ್ 2016ರ ಪುರುಷರ ಹಾಕಿ ಸ್ಪರ್ಧೆಯಲ್ಲಿ ಗ್ರೂಪ್ ಆಫ್ ಡೆತ್‌ನಲ್ಲಿದ್ದಿದ್ದು ಸ್ಪಷ್ಟವಾಗಿದೆ. ಪೂಲ್ ಬಿಯಲ್ಲಿದ್ದ ಮೂರು ರಾಷ್ಟ್ರಗಳು ಸೆಮಿಫೈನಲಿಸ್ಟ್‌ಗಳಾಗಿದ್ದು, ಹಾಲಿ ಚಾಂಪಿಯನ್ಸ್ ಜರ್ಮನಿ ಕೂಡ ಅದರಲ್ಲಿ ಸೇರಿದೆ. ಕ್ವಾರ್ಟರ್‌‌ಫೈನಲ್‌ನಲ್ಲಿ ಭಾರತವನ್ನು 3-1ರಿಂದ ಸೋಲಿಸಿದ ಬೆಲ್ಜಿಯಂ ಮಾತ್ರ ಪೂಲ್‌ ಎನಿಂದ ಸೆಮಿಫೈನಲ್ ಪ್ರವೇಶಿಸಿದ ಏಕಮಾತ್ರ ತಂಡವಾಗಿದೆ. 

ಬೆಲ್ಜಿಯನ್ನರು ನಾಕ್‌ಔಟ್ ಸುತ್ತಿನಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಸೋತಿದ್ದರು. ಅರ್ಜಂಟೈನಾ, ಬೆಲ್ಜಿಯಂ, ನೆದರ್‌ಲೆಂಡ್ಸ್ ಮತ್ತು ಜರ್ಮನಿ ಸೆಮಿಫೈನಲ್ಸ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅರ್ಜಂಟೈನಾ ಸ್ಪೇನ್ ತಂಡವನ್ನು 2-1ರಿಂದ ಸೋಲಿಸಿ ಜರ್ಮನಿ ವಿರುದ್ಧ ಸೆಮಿಫೈನಲ್ಸ್ ಆಡಲಿದೆ. ಜರ್ಮನಿ 2-0ಯಿಂದ ಫೈಟ್‌ಬ್ಯಾಕ್ ಮಾಡಿ ನ್ಯೂಜಿಲೆಂಡ್ ತಂಡವನ್ನು 3-2ರಿಂದ ಸೋಲಿಸಿತು.
 
 ಏಷ್ಯನ್ ಚಾಂಪಿಯನ್ಸ್ ಭಾರತವನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಬೆಲ್ಜಿಯಂ ಐರೋಪ್ಯ ಚಾಂಪಿಯನ್ಸ್ ನೆದರ್‌ಲೆಂಡ್ಸ್ ತಂಡವನ್ನು ಈಗ ಎದುರಿಸಲಿದೆ. ನೆದರ್‌ಲೆಂಡ್ಸ್ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 4-0ಯಿಂದ ಅಚ್ಚರಿಯ ಜಯ ಗಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಾಕ್ಸಿಂಗ್ ಕ್ವಾರ್ಟರ್‌ಫೈನಲ್‌ನಲ್ಲಿ ವಿಕಾಸ್ ಕೃಷ್ಣನ್‌ಗೆ ಸೋಲು