ರಿಯೊ ಡೆ ಜನೈರೊ: ಮಹಿಳೆಯರ 3000 ಮೀ ಸ್ಟೀಪಲ್ ಚೇಸ್ ಫೈನಲ್‌ಗೆ ಭಾರತದ ಲಲಿತಾ ಬಾಬರ್ ಅರ್ಹತೆ ಪಡೆದಿದ್ದಾರೆ. ಅರ್ಹತಾ ಸುತ್ತಿನ ಹೀಟ್ 2ನಲ್ಲಿ ನಾಲ್ಕನೆಯವರಾಗಿ ರಾಷ್ಟ್ರೀಯ ದಾಖಲೆ ಸಮಯದಲ್ಲಿ ಮುಗಿಸಿದರು. ಅವರ ಸಹವರ್ತಿ ಸುಧಾ ಸಿಂಗ್ ಎಲಿಮಿನೇಟ್ ಆಗಿದ್ದಾರೆ.
1984ರಲ್ಲಿ ಲಾಸ್ ಏಂಜಲಿಸ್ ಕ್ರೀಡಾಕೂಟದಲ್ಲಿ ಪಿಟಿ ಉಷಾ ಟ್ರಾಕ್ ಫೈನಲ್ ಮುಟ್ಟಿದ ಬಳಿಕ ಲಲಿತಾ ಫೈನಲ್ ತಲುಪಿದ ಮೊದಲ ಮಹಿಳೆಯಾಗಿದ್ದಾರೆ.
ದಕ್ಷಿಣ ಕೊರಿಯಾದ ಇಂಚನ್‌ನಲ್ಲಿ ನಡೆದ ಏಷ್ಯಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಲಲಿತಾ ಹೀಟ್ಸ್‌ನಲ್ಲಿ ಏಳನೇ ಸ್ಥಾನ ಪಡೆದಿದ್ದು 9 ನಿಮಿಷ 19.76 ಸೆ.ಗಳಲ್ಲಿ ಓಡಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಹೀಟ್ಸ್‌ನಲ್ಲಿ ಟಾಪ್ ಮೂವರು ತಾನೇತಾನಾಗಿ ಅರ್ಹತೆ ಪಡೆದಿದ್ದರೆ, ಲಲಿತಾ ಉಳಿದವರ ಪೈಕಿ 6ನೇ ಅತ್ಯಂತ ವೇಗಿಯೆಂಬ ಶ್ರೇಯಕ್ಕೆ ಪಾತ್ರರಾದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ