ಡಿ ಸಿಲ್ವ-ಚಾಂಡಿಮಾಲ್ ಜತೆಯಾಟದಿಂದ ಶ್ರೀಲಂಕಾ ಬಚಾವ್

ಶನಿವಾರ, 13 ಆಗಸ್ಟ್ 2016 (19:53 IST)
ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಬೌಲರುಗಳು ಕೇವಲ 15 ನಿಮಿಷಗಳ ಅವಧಿಯಲ್ಲಿ ನಾಲ್ವರು ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳಿಸಿದ್ದರು. ಇದರಿಂದ ಆತಿಥೇಯ ತಂಡ 26ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. 
 
ಆದರೆ ದಿನೇಶ್ ಚಾಂಡಿಮಾಲ್ (64 ನಾಟೌಟ್) ಮತ್ತು ಧನಂಜಯ ಡಿಸಿಲ್ವ(116 ನಾಟೌಟ್) ಅವರ 5 ನೇ ವಿಕೆಟ್‌ಗೆ ಸದೃಢ ಜತೆಯಾಟದಿಂದ ಶ್ರೀಲಂಕಾ ತಂಡವನ್ನು ಅಜೇಯ 188 ರನ್ ಜತೆಯಾಟದೊಂದಿಗೆ 5 ವಿಕೆಟ್‌ಗೆ 214 ರನ್ ಸ್ಕೋರ್ ಮಾಡಲು ನೆರವಾದರು.
 
ಆಸ್ಟ್ರೇಲಿಯ ಪರ ಪೀಟರ್ ನೆವಿಲ್ ಜಾನ್ ಹಾಲೆಂಡ್ ಎಸೆತದಲ್ಲಿ ಡಿ ಸಿಲ್ವ ನೀಡಿದ ಸುಲಭ ಕ್ಯಾಚ್ ಕೈಬಿಟ್ಟಿದ್ದರಿಂದ ಡಿಸಿಲ್ವಾಗೆ ಜೀವದಾನ ಸಿಕ್ಕಿತು.
 
ಸ್ಟಾರ್ಕ್ ಅವರ ಎಸೆತದಲ್ಲಿ ಡಿಸಿಲ್ವ ನೀಡಿದ್ದ ಕ್ಯಾಚನ್ನು ಶಾನ್ ಮಾರ್ಶ್ ಶಾರ್ಟ್‌ ಕವರ್‌ನಲ್ಲಿ ಕೈಬಿಟ್ಟಿದ್ದರಿಂದ ಡಿಸಿಲ್ವಾಗೆ ಎರಡನೇ ಜೀವದಾನ ಸಿಕ್ಕಿತು. ಫೀಲ್ಡಿಂಗ್ ವೈಫಲ್ಯದ ಅನುಕೂಲ ಪಡೆದ ಇವರಿಬ್ಬರು ಮೈದಾನದ ಎಲ್ಲ ಮೂಲೆಗೂ ಚೆಂಡನ್ನು ಹೊಡೆದು ಆಯಾ ಮೈಲಿಗಲ್ಲನ್ನು ಮುಟ್ಟಿದರು. ಡಿಸಿಲ್ವಾ 116 ರನ್ ಮತ್ತು ಚಾಂಡಿಮಾಲ್ 64 ರನ್‌ಗಳಿಂದ ಅಜೇಯರಾಗಿ ಉಳಿದು ಶ್ರೀಲಂಕಾಗೆ ಆಸರೆಯಾಗಿ ನಿಂತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಿಯೊ ಒಲಿಂಪಿಕ್ಸ್: ರಾಫೆಲ್ ನಡಾಲ್‌ಗೆ ಡಬಲ್ಸ್ ಚಿನ್ನ, ಸಿಂಗಲ್ಸ್ ಚಿನ್ನಕ್ಕೆ ಸಮೀಪ