ಮುಂದಿನ ವಾರ ಬಹು ನಿರೀಕ್ಷಿತ ಒಲಿಂಪಿಕ್ ಕ್ರೀಡಾಕೂಟ ಆರಂಭವಾಗಲಿದ್ದು, ಭಾರತ ತಂಡದ ಸ್ಪರ್ಧಾಳುಗಳು ರಿಯೋ ಒಲಿಂಪಿಕ್ ಗ್ರಾಮಕ್ಕೆ ಬರಲಾರಂಭಿಸಿದ್ದಾರೆ. ಆಗಸ್ಟ್ 5ರಂದು ಒಲಿಂಪಿಕ್ ಉದ್ಘಾಟನೆಯಾಗಲಿದ್ದು, ಈಗಾಗಲೇ ಭಾರತ ತಂಡದ ಅರ್ಧದಷ್ಟು ಮಂದಿ ರಿಯೊಗೆ ಆಗಮಿಸಿದ್ದು, ಎರಡು ಹಾಕಿ ತಂಡಗಳು ಈಗಾಗಲೇ ರಿಯೋದಲ್ಲಿ ಬೀಡುಬಿಟ್ಟಿವೆ.
ಭಾರತ ತಂಡದ ಅಧಿಕೃತ ಸ್ವಾಗತ ಸಮಾರಂಭ ಆಗಸ್ಟ್ 2ರಂದು ಮಧ್ಯಾಹ್ನ ನಡೆಯಲಿದೆ. ಸ್ವಾಗತ ಸಮಾರಂಭವು ಅಧಿಕೃತವಾಗಿದ್ದು ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಿ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಇದೊಂದು ತಂಡದ ಬೆಸುಗೆಯ ಕಾರ್ಯಕ್ರಮ ಎಂದು ಭಾರತ ತಂಡದ ಉಸ್ತುವಾರಿ ರಾಕೇಶ್ ಗುಪ್ತಾ ತಿಳಿಸಿದ್ದಾರೆ.
ಬಿಲ್ಲುಗಾರಿಕೆ ತಂಡವು ರಿಯೊದಲ್ಲಿ ಮೊದಲಿಗೆ ಆಗಮಿಸಿದ್ದು, ಉಳಿದವು ಅಥ್ಲೆಟಿಕ್ಸ್ ತಂಡ, ಬಾಕ್ಸರುಗಳು ಮತ್ತು ಶೂಟರ್‌ಗಳು ನಂತರ ಆಗಮಿಸಿದ್ದಾರೆ. ಒಂದೆರಡು ದಿನಗಳ ಮುಂಚೆ ಆಗಮಿಸಿದ್ದ ಇತರೆ ಶೂಟರ್‌ಗಳನ್ನು 2012ರ ಒಲಿಂಪಿಕ್ ಕಂಚಿನ ಪದಕ ವಿಜೇತ ಗಗನ್ ನಾರಂಗ್ ಸೇರಿಕೊಂಡರು.
ಭಾರತ ತಂಡದ ಸದಸ್ಯರು ಒಲಿಂಪಿಕ್ ಗ್ರಾಮಕ್ಕೆ ಮತ್ತು ಅಲ್ಲಿನ ವಿವಿಧ ಚಟುವಟಿಕೆಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ಅನೇಕ ಅಥ್ಲೀಟ್‌ಗಳು ತರಬೇತಿ ಬಳಿಕ ಪ್ಲಾಜಾ ಮತ್ತು ವರ್ಚುಯಲ್ ರಿಯಾಲಿಟಿ ವ್ಯವಸ್ಥೆಯಲ್ಲಿ ಮನರಂಜನೆ ಪಡೆಯುತ್ತಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.