Select Your Language

Notifications

webdunia
webdunia
webdunia
webdunia

ರಿಯೋ 2016: ಸೈಕಲ್ ರೇಸ್‌ನಲ್ಲಿ ಅಪಘಾತ, ಅನ್ನೆಮಿಕ್‌ಗೆ ಕೈತಪ್ಪಿದ ಚಿನ್ನ

ರಿಯೋ 2016: ಸೈಕಲ್ ರೇಸ್‌ನಲ್ಲಿ ಅಪಘಾತ,  ಅನ್ನೆಮಿಕ್‌ಗೆ ಕೈತಪ್ಪಿದ ಚಿನ್ನ
ರಿಯೊ ಡಿ ಜನೈರೊ , ಸೋಮವಾರ, 8 ಆಗಸ್ಟ್ 2016 (14:46 IST)
ರಿಯೊ ಡಿ ಜನೈರೊ: ಯಾವುದೇ ಕ್ರೀಡೆಯಲ್ಲಿ ಸ್ವಲ್ಪ ಎಚ್ಚರತಪ್ಪಿದರೂ ಜೀವಕ್ಕೇ ಅಪಾಯವಾಗುವ ಸಾಧ್ಯತೆಯಿರುತ್ತದೆ. ರಿಯೋ ಒಲಿಂಪಿಕ್ಸ್‌ನಲ್ಲಿ ಡಚ್ ಸೈಕಲ್ ರೇಸ್ ಸ್ಪರ್ಧಿ ಅನ್ನೆಮಿಕ್ ವಾನ್ ವ್ಲುಟನ್ ರೇಸ್‌ನಲ್ಲಿ ಮೊದಲನೆಯವರಾಗಿ ಚಿನ್ನದ ಪದಕ ಗೆಲ್ಲುವುದಕ್ಕೆ ಸನಿಹದಲ್ಲೇ ಇದ್ದರು.

ಹೈ ಸ್ಪೀಡ್ ರೋಡ್ ರೇಸಿನಲ್ಲಿ ಗುರಿಯನ್ನು ತಲುಪಲು ಕೇವಲ 10 ಕಿಮೀ ದೂರವಿರುವಷ್ಟರಲ್ಲಿ ದುರದೃಷ್ಟವಶಾತ್ ಅವರ ಸೈಕಲ್ ಅಪಘಾತಕ್ಕೀಡಾಯಿತು. 
 
 33 ವರ್ಷದ ಸ್ಪರ್ಧಿ ಅನ್ನೆಮಿಕ್ ಸೈಕಲ್ ಹ್ಯಾಂಡಲ್‌ಬಾರ್ ಮೇಲೆ ಆಯತಪ್ಪಿ ರಸ್ತೆ ಪಕ್ಕದ ಕಾಂಕ್ರೀಟ್ ತಡೆಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದ  ಜೀವಚ್ಛವದಂತೆ ಮಲಗಿದ್ದರು. ಇತರೆ ಸ್ಪರ್ಧಿಗಳು ದಿಗ್ಭ್ರಮೆಯಿಂದ ನೋಡುತ್ತಾ ಮುಂದೆ ಸಾಗಿದ್ದರು. ಅನ್ನೆಮಿಕ್ ಅವರನ್ನು ರಿಯೊ ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು,  ನಂತರ ವೈದ್ಯರು ಮುಂದಿನ ಕ್ರಮವನ್ನು ಸೂಚಿಸಲಿದ್ದಾರೆ. ಅನ್ನೆಮಿಕ್ ವ್ಲುಟನ್ ಅವರು 137 ಕಿಮೀ ರೇಸ್‌ನಲ್ಲಿ ಭಾಗವಹಿಸಿದ್ದಾಗ ಈ ದುರ್ಘಟನೆ ನಡೆದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಬಲ್ಸ್ ಸೋತಿದ್ದರೂ ಸಾನಿಯಾಗೆ ಮಿಶ್ರ ಡಬಲ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ