ದುಬೈ: ಚೀನಾ ಓಪನ್ ವಿಜೇತೆ, ಹಾಂಗ್ ಕಾಂಗ್ ಓಪನ್ ನಲ್ಲಿ ರನ್ನರ್ ಅಪ್ ಆಗಿದ್ದಕ್ಕೆ ವಿಶ್ವ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ. ಸಿಂಧುಗೆ ಆಡುವ ಅವಕಾಶ ಲಭಿಸಿದೆ. ಈ ಪ್ರತಿಷ್ಠೆಯ ಸೂಪರ್ ಸೀರೀಸ್ ಇಂದಿನಿಂದ ಪ್ರಾರಂಭವಾಗುತ್ತಿದ್ದು, ಸಿಂಧು ಮೇಲೆ ನಿರೀಕ್ಷೆ ಹೆಚ್ಚಿದೆ.
ಅತ್ಯುತ್ತಮ ಎಂಟು ಆಟಗಾರರಿಗೆ ಮಾತ್ರ ವಿಶ್ವ ಸೂಪರ್ ಸೀರೀಸ್ ನಲ್ಲಿ ಆಡುವ ಅವಕಾಶ ಲಭಿಸುತ್ತದೆ. ಅದರಲ್ಲಿ ಸಿಂಧು ಕೂಡಾ ಒಬ್ಬರು ಎಂಬುದು ವಿಶೇಷ. ಭಾರತದ ಇನ್ನೊಬ್ಬ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಈ ಪ್ರತಿಷ್ಠಿತ ಕಣಕ್ಕೆ ಆಯ್ಕೆಯಾಗಲು ವಿಫಲರಾಗಿದ್ದರು.
ಮೊದಲ ಪಂದ್ಯದಲ್ಲಿ ಸಿಂಧು ಜಪಾನ್ ನ ವಿಶ್ವ ನಂ.8 ಅಕನೆ ಯಮಗುಚಿ ಎದುರು ಸೆಣಸಾಡಲಿದ್ದಾರೆ. ಈ ಆಟಗಾರ್ತಿಯನ್ನು ಉಬರ್ ಕಪ್ ನಲ್ಲಿ ಸಿಂಧು ಸೋಲಿಸಿರುವುದರಿಂದ ಭಾರತೀಯ ಆಟಗಾರ್ತಿಯ ಆತ್ಮವಿಶ್ವಾಸ ಹೆಚ್ಚಿದೆ. ಕಳೆದ ಸೂಪರ್ ಸೀರೀಸ್ ಗಳಲ್ಲಿ ಆಡಿದಂತೆ ಸಿಂಧು, ಭಾರತಕ್ಕೆ ಮತ್ತೊಂದು ಕಿರೀಟ ತರುತ್ತಾರಾ ಎಂದು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ