Select Your Language

Notifications

webdunia
webdunia
webdunia
webdunia

ಹಾಂಗ್ ಕಾಂಗ್ ಓಪನ್ ಸೆಮಿಫೈನಲ್ ಗೆ ಪಿವಿ ಸಿಂಧು, ಸೈನಾ ನೆಹ್ವಾಲ್ ಗೆ ಕ್ವಾರ್ಟರ್ ಫೈನಲ್ ನಲ್ಲಿ ಸೋಲು

ಹಾಂಗ್ ಕಾಂಗ್ ಓಪನ್ ಸೆಮಿಫೈನಲ್ ಗೆ ಪಿವಿ ಸಿಂಧು, ಸೈನಾ ನೆಹ್ವಾಲ್ ಗೆ ಕ್ವಾರ್ಟರ್ ಫೈನಲ್ ನಲ್ಲಿ ಸೋಲು
Hong Kong , ಶನಿವಾರ, 26 ನವೆಂಬರ್ 2016 (08:53 IST)
ನವದೆಹಲಿ: ಚೀನಾ ಓಪನ್ ಸೀರೀಸ್ ಗೆದ್ದ ಪಿ.ವಿ.ಸಿಂಧು ಹಾಂಗ್ ಕಾಂಗ್ ಓಪನ್ ಬ್ಯಾಡ್ಮಿಂಟನ್ ಕೂಟದ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇನ್ನೊಬ್ಬ ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್ ನಲ್ಲಿ ಸೋಲೊಪ್ಪಿದ್ದಾರೆ.

ಕ್ವಾರ್ಟರ್ ಫೈನಲ್ ನಲ್ಲಿ ಪಿ.ವಿ. ಸಿಂಧು ಕ್ಷಿಯಾವು ಲಿಯಾಂಗ್ ವಿರುದ್ಧ 21-17, 21-23, 21-18 ಅಂತರದಿಂದ ಗೆದ್ದರು.  ರೋಚಕವಾಗಿ ಸಾಗಿದ್ದ ಪಂದ್ಯವನ್ನು ಒಂದು ಹಂತದಲ್ಲಿ ಸಿಂಧು ಸೋಲಿನಂಚಿಗೆ ಸಿಲುಕಿದ್ದರು. ಆದರೆ ತಿರುಗಿಬಿದ್ದ ಸಿಂಧು ಅಂತಿಮ ಸೆಟ್ ತಮ್ಮದಾಗಿಸಿಕೊಂಡರು. ಸೆಮಿಫೈನಲ್ ನಲ್ಲಿ ಅವರು ಹಾಂಗ್ ಕಾಂಗ್ ನ ಚೀಯಿಂಗ್ ಎನ್ ಗಾನ್ ಜತೆ ಸೆಣಸಲಿದ್ದಾರೆ.

ಇನ್ನೊಬ್ಬ ಭಾರತೀಯ ಆಟಗಾರ್ತಿ ಸೈನಾ ನೆಹ್ವಾಲ್ , ಹಾಂಗ್ ಕಾಂಗ್ ನ ಚೀಯಿಂಗ್ ವಿರುದ್ಧ 8-21, 21-18, 19-21 ಅಂತರದಿಂದ  ಸೋತರು. ಮಾಜಿ ವಿಶ್ವ ನಂ.1 ಆಟಗಾರ್ತಿ ಸೈನಾಗೆ ಯಾಕೋ ಇತ್ತೀಚೆಗೆ ಅದೃಷ್ಟ ಕೈಕೊಡುತ್ತಿದೆ.

ಇದೇ ವೇಳೆ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲೂ ಸಿಂಧು ಸೈನಾರನ್ನು ಹಿಂದಿಕ್ಕಿದ್ದಾರೆ. ಸಿಂಧು ಎರಡು ಸ್ಥಾನ ಮೇಲೇರಿದ್ದು, 38,49 ಅಂಕಗಳೊಂದಿಗೆ ಒಂಭತ್ತನೇ ಶ್ರೇಯಾಂಕ ಗಳಿಸಿದ್ದಾರೆ. ಚೀನಾ ಓಪನ್ ನಲ್ಲಿ ಮೊದಲ ಸುತ್ತಿನಲ್ಲೇ ಸೋತ ಸೈನಾ ಐದು ಸ್ಥಾನ ಕೆಳಗಿಳಿದಿದ್ದು 38,080 ಅಂಕಗಳಷ್ಟೇ ಗಳಿಸಿದ್ದು, 11 ನೇ ಶ್ರೇಯಾಂಕ ಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಾರ್ಖಾಂಡ್ ರಾಜ್ಯಕ್ಕೆ ಎಂ.ಎಸ್.ಧೋನಿ ಪ್ರಚಾರ ರಾಯಭಾರಿ