Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್ 2022: ಕೊನೆ ಕ್ಷಣದಲ್ಲಿ ಭಾರತದ ಧ್ವಜಾಧಾರಿಯಾಗುವ ಅವಕಾಶ ಪಿ.ವಿ. ಸಿಂಧುಗೆ

ಕಾಮನ್ ವೆಲ್ತ್ ಗೇಮ್ಸ್ 2022: ಕೊನೆ ಕ್ಷಣದಲ್ಲಿ ಭಾರತದ ಧ್ವಜಾಧಾರಿಯಾಗುವ ಅವಕಾಶ ಪಿ.ವಿ. ಸಿಂಧುಗೆ
ಬರ್ಮಿಂಗ್ ಹ್ಯಾಮ್ , ಗುರುವಾರ, 28 ಜುಲೈ 2022 (10:26 IST)
ಬರ್ಮಿಂಗ್ ಹ್ಯಾಮ್: ಇಂದಿನಿಂದ ಆರಂಭವಾಗಲಿರುವ ಕಾಮನ್ ವೆಲ್ತ್ ಗೇಮ್ಸ್ 2022 ರ ಕೂಟದಲ್ಲಿ ಭಾರತದ ಧ್ವಜಾಧಾರಿಯಾಗುವ ಅವಕಾಶ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುಗೆ ಒಲಿದಿದೆ.

ಈ ಬಾರಿ ಭಾರತೀಯ ಪಥ ಸಂಚಲನ ವೇಳೆ ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಧ್ವಜ ಹಿಡಿದು ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ನೀರಜ್ ಗೆ ಗಾಯವಾಗಿದ್ದರಿಂದ ಕೊನೆ ಗಳಿಗೆಯಲ್ಲಿ ಕೂಟದಿಂದ ಹೊರಬಿದ್ದಿದ್ದಾರೆ.

ಹೀಗಾಗಿ ನೀರಜ್ ಕೈ ತಪ್ಪಿದ ಗೌರವ ಪಿ. ವಿ. ಸಿಂಧುಗೆ ಒಲಿದಿದೆ. ಎರಡು ಒಲಿಂಪಿಕ್ ಪದಕ ವಿಜೇತೆಯಾಗಿರುವ ಸಿಂಧು ಈ ಬಾರಿ ಭಾರತಕ್ಕೆ ಚಿನ್ನ ಗೆದ್ದು ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಫೋಟೋ ತೆಗೆಯುವಾಗ ಇಣುಕಿ ನೋಡಿದ ದ್ರಾವಿಡ್: ದಿನೇಶ್ ಕಾರ್ತಿಕ್ ತಮಾಷೆ ಮಾಡಿದ್ದು ಹೀಗೆ!