ಚೀನಾದ ಈಜುಗಾರ್ತಿ ಚೆನ್ ಕ್ಸಿನ್‌ಯಿ ರಿಯೊ ಒಲಿಂಪಿಕ್ಸ್‌ನ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆಂದು ಚೀನಾದ ಈಜು ಸಂಸ್ಥೆ ತಿಳಿಸಿದೆ. ಡಿಹೈಡ್ರೋಕ್ಲೋರೋಥಿಯಾಜೈಡ್ ಮೂತ್ರವರ್ಧಕದ ಪಾಸಿಟಿವ್ ಫಲಿತಾಂಶ ಬಂದಿದ್ದು, 18 ವರ್ಷದ ಯುವತಿ ಮಹಿಳೆಯರ 100 ಮೀ ಬಟರ್‌ಫ್ಲೈ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಳು.
ಚೆನ್ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಅವಳ ಬಿ ಮಾದರಿ ಪರೀಕ್ಷೆಗೆ ಮತ್ತು ವಿಚಾರಣೆಗೆ ಅರ್ಜಿ ಸಲ್ಲಿಸಿದ್ದಾಳೆ. ಡ್ಯುರೇಟಿಕ್ಸ್ ಮೂತ್ರವರ್ಧಕವು ಮೂತ್ರದ ಪ್ರಮಾಣವನ್ನು ಹೆಚ್ಚಿಸಿ ಸಾಧನೆ ವೃದ್ಧಿಸುವ ಮದ್ದುಗಳ ಉಪಸ್ಥಿತಿಯನ್ನು ಮುಚ್ಚಿಹಾಕುತ್ತದೆ.
2014ರ ಏಷ್ಯನ್ ಕ್ರೀಡಾಕೂಟದಲ್ಲಿ 100 ಮೀಟರ್ ಬಟರ್‌ಫ್ಲೈ ಮತ್ತು 50 ಮೀ ಫ್ರೀಸ್ಟೈಲ್ ಈವೆಂಟ್‌ಗಳಲ್ಲಿ ಚಿನ್ನ ಗೆದ್ದಾಗ ಚೆನ್ ಮೊದಲಿಗೆ ಸುದ್ದಿಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ