Select Your Language

Notifications

webdunia
webdunia
webdunia
webdunia

ಒಲಿಂಪಿಕ್ ಚಿನ್ನದ ಪದಕದ ಮೌಲ್ಯ ಬರೀ 39,446 ರೂ

ಒಲಿಂಪಿಕ್ ಚಿನ್ನದ ಪದಕದ ಮೌಲ್ಯ ಬರೀ 39,446 ರೂ
ನವದೆಹಲಿ , ಬುಧವಾರ, 24 ಆಗಸ್ಟ್ 2016 (17:47 IST)
ಒಲಿಂಪಿಕ್ ಪದಕವನ್ನು ಗೆಲ್ಲುವುದು ಅಥ್ಲೀಟ್‌ಗಳು ಕನಸು ಕಾಣುವ ಸಾಧನೆಯಾಗಿದೆ. ಅದನ್ನು ತಮ್ಮ ಕೊರಳಿಗೆ ಹಾಕಿಕೊಳ್ಳಲು ಅಥ್ಲೀಟ್‌ಗಳು ಜಗತ್ತಿನಾದ್ಯಂತ ಕಠಿಣ ಪರಿಶ್ರಮ ಪಡುತ್ತಾರೆ. ಅಥ್ಲೀಟ್‌ಗಳಿಗೆ ಚಿನ್ನದ ಪದಕವು ಅಮೂಲ್ಯ ಲೋಹಕ್ಕಿಂತ ಹೆಚ್ಚಿನ ಆಸ್ತಿಯಾಗಿದ್ದು, ಅದರಲ್ಲಿ ಭಾವನಾತ್ಮಕ ಮೌಲ್ಯ ಬೆಸುಗೆ ಹಾಕಿಕೊಂಡಿದೆ. ಅದನ್ನೆಲ್ಲಾ ಬದಿಗಿಟ್ಟು ಜ್ಞಾನದ ಉದ್ದೇಶಕ್ಕಾಗಿ ಲೋಹದ ತುಂಡಾಗಿ ಚಿನ್ನದ ಪದಕದ ಮೌಲ್ಯ ಎಷ್ಟಿರಬಹುದು ಎಂದು ನೋಡಿದಾಗ ಅದರ ಮೌಲ್ಯ ಕೇವಲ 39,446 ರೂ.ಗಳೆಂದರೆ ಆಶ್ಚರ್ಯವಾಗುತ್ತದೆ.
 
 
500 ಗ್ರಾಂ ತೂಗುವ ಚಿನ್ನದ ಪದಕವನ್ನು ಸಂಪೂರ್ಣವಾಗಿ ಚಿನ್ನದಿಂದ ತಯಾರಿಸಿಲ್ಲ. 20ನೇ ಶತಮಾನದಲ್ಲಿ ಅಪ್ಪಟ ಚಿನ್ನದಿಂದ ತಯಾರಿಸಿದ ಪದಕವನ್ನು ನೀಡುವ ಪರಿಪಾಠವನ್ನು ನಿಲ್ಲಿಸಲಾಯಿತು. ಇಂದು ಚಿನ್ನದ ಪದಕವು ಶೇ. 95ರಷ್ಟು ಬೆಳ್ಳಿಯ ಲೋಹದಿಂದ ಕೂಡಿದ್ದರೆ ಉಳಿದದ್ದು ಚಿನ್ನವಾಗಿರುತ್ತದೆ. ಚಿನ್ನದ ಪದಕವು 99.9% ಶುದ್ಧತೆಯ 6 ಗ್ರಾಂ ಚಿನ್ನ ಮತ್ತು 92.5% ಶುದ್ಧತೆಯ 594 ಗ್ರಾಂ ಸ್ಟರ್ಲಿಂಗ್ ಬೆಳ್ಳಿಯಿಂದ ಕೂಡಿದೆ. ಈ ಚಿನ್ನದ ಪದಕವನ್ನು ಅಪ್ಪಟ ಚಿನ್ನದಿಂದ ತಯಾರಿಸಿದ್ದರೆ ಇದರ ಮೌಲ್ಯ 14 ಲಕ್ಷ ರೂ.ಗಳು.
 
ಬೆಳ್ಳಿ ಪದಕದ ಮೌಲ್ಯ 20,493 ರೂ.ಗಳಾಗಿದ್ದು, ಪದಕವು 500 ಗ್ರಾಂ ಸ್ಟರ್ಲಿಂಗ್ ಬೆಳ್ಳಿ 92.5% ಶುದ್ಧತೆಯಿಂದ ಕೂಡಿದೆ. ಕಂಚಿನ ಪದಕದ ಮೌಲ್ಯ 167 ರೂ. ಅದು 475 ಗ್ರಾಂನ 93.7% ಶುದ್ಧತೆಯ ತಾಮ್ರ ಮತ್ತು ಶೇ.25 ಗ್ರಾಂ ಜಿಂಕ್‌ನಿಂದ ಕೂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ಆಟಗಾರನಿಗೆ ನಿರ್ದಿಷ್ಟ ಪ್ರವಾಸ ಮಾಡುವಂತೆ ಬಲವಂತ ಸಾಧ್ಯವಿಲ್ಲ: ಮಾರ್ಗನ್