Select Your Language

Notifications

webdunia
webdunia
webdunia
webdunia

ಇಂಗ್ಲೆಂಡ್ ಆಟಗಾರನಿಗೆ ನಿರ್ದಿಷ್ಟ ಪ್ರವಾಸ ಮಾಡುವಂತೆ ಬಲವಂತ ಸಾಧ್ಯವಿಲ್ಲ: ಮಾರ್ಗನ್

ಇಂಗ್ಲೆಂಡ್ ಆಟಗಾರನಿಗೆ ನಿರ್ದಿಷ್ಟ ಪ್ರವಾಸ ಮಾಡುವಂತೆ ಬಲವಂತ ಸಾಧ್ಯವಿಲ್ಲ: ಮಾರ್ಗನ್
ಲಂಡನ್ , ಬುಧವಾರ, 24 ಆಗಸ್ಟ್ 2016 (16:57 IST)
ಇಂಗ್ಲೆಂಡ್‌ನ ಯಾವುದೇ ಆಟಗಾರನನ್ನು ನಿರ್ದಿಷ್ಟ ರಾಷ್ಟ್ರಕ್ಕೆ ಪ್ರವಾಸ ಮಾಡುವಂತೆ ಬಲವಂತ ಮಾಡಲು ಸಾಧ್ಯವಿಲ್ಲ ಎಂದು ಇಯಾನ್ ಮಾರ್ಗನ್ ತಿಳಿಸಿದರು. ಬಾಂಗ್ಲಾದೇಶ ಮತ್ತು ಭಾರತದ ಪಿಚ್‌ಗಳನ್ನು ಪರಿಶೀಲಿಸಿ ಹಿಂತಿರುಗಿದ ಮೂವರು ಸದಸ್ಯರ ಸಮಿತಿ ಜತೆ ಗುರುವಾರದ ನಿಗದಿತ ಭೇಟಿಗೆ ಮುನ್ನ ಮಾರ್ಗನ್ ಮೇಲಿನಂತೆ ತಿಳಿಸಿದರು.

ಬಾಂಗ್ಲಾದ ಢಾಕಾದಲ್ಲಿ ಭಯೋತ್ಪಾದಕ ದಾಳಿಯ ಬಗ್ಗೆ ಆಟಗಾರರು ಆತಂಕ ವ್ಯಕ್ತಪಡಿಸಿದ ಬಳಿಕ ಸಮಿತಿಯು ಬಾಂಗ್ಲಾದಲ್ಲಿನ ಪ್ರಸಕ್ತ ಭದ್ರತಾ ಸ್ಥಿತಿ ಕುರಿತು ತಂಡಕ್ಕೆ ವಿವರಿಸಲಿದೆ. ಯಾರಿಗೂ ನಿರ್ದಿಷ್ಟ ಪ್ರವಾಸ ತೆರಳುವಂತೆ ಬಲವಂತ ಮಾಡಲು ಸಾಧ್ಯವಿಲ್ಲ ಎಂದು ಮಾರ್ಗನ್ ಹೇಳಿದರು.
 
ಐದು ಪಂದ್ಯಗಳ ಏಕದಿನ ಸರಣಿ ಮತ್ತು ಒಂದು ಟ್ವೆಂಟಿ 20 ಪಂದ್ಯವನ್ನು ಪಾಕ್ ವಿರುದ್ಧ ಆಡಿ ಇಂಗ್ಲೆಂಡ್ ಸೆ. 30ರಂದು ಬಾಂಗ್ಲಾ ವಿರುದ್ಧ ಮೂರು ಏಕದಿನಗಳು ಮತ್ತು ಎರಡು ಟೆಸ್ಟ್ ಆಡಲು ನಿಗದಿಯಾಗಿತ್ತು. ನಾಯಕ ಮಾರ್ಗನ್ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯನ್ನು ಪ್ರವಾಸಕ್ಕೆ ಸಂಬಂಧಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಕ್ಕೆ ಬೆಂಬಲಿಸಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸಿ ಪಾಕ್ ವಿರುದ್ಧ ತ್ರಿವಳಿ ಸ್ಪಿನ್ ದಾಳಿ: ಮಾರ್ಗನ್ ಪರಿಶೀಲನೆ